ಸರಸ್ವತಿ ನಟರಾಜ್ ಜನಿಸಿದ್ದು 1958ರ ಏಪ್ರಿಲ್ 2ರಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ. ತಂದೆ- ಎಸ್. ಕೇಶವಮೂರ್ತಿ, ತಾಯಿ- ಮಹಾಲಕ್ಷಮ್ಮ. ಜ್ಯೋತಿ(2008), ಮನೆ (2010) ಕಾದಂಬರಿಗಳು ಹಾಗೂ ದಣಿದ ಜೀವಕ್ಕೆ ಮತ್ತೆ ಕನಸನುಣಿಸಿ (2008) ಕಥಾಸಂಕಲನ ಪ್ರಕಟವಾಗಿವೆ.
ಮಾಸ್ತಿ ಕಾದಂಬರಿ ಸ್ಪರ್ಧೆಯಲ್ಲಿ 'ಮನೆ' ಕಾದಂಬರಿಗೆ ಮೊದಲ ಬಹುಮಾನ ಪಡೆದಿದ್ದಾರೆ.