About the Author

ಲೇಖಕ, ಕವಿ ಸಂತೋಷ ಅಂಗಡಿ ಮೂಲತಃ ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ರಣತೂರು ಗ್ರಾಮದವರು. 1987ರಲ್ಲಿ ಜನಿಸಿದ ಅವರು ಬಿ.ಎಸ್.ಸಿ ಪದವೀಧರರಾಗಿದ್ದು, ಸಾಣೀಹಳ್ಳಿಯ ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆಯಲ್ಲಿ ರಂಗಶಿಕ್ಷಣದಲ್ಲಿ ಪದವಿ ಪೂರೈಸಿದ್ದಾರೆ.

ಶಿವಸಂಚಾರದಲ್ಲಿ ನಟರಾಗಿ 145ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಭಾಗಿಯಾಗಿರುವ ಅವರು ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಕಥೆ ಮತ್ತು ಕವಿತೆಗಳ ರಂಗ ಪ್ರಸ್ತುತಿ ಹಾಗೂ ಅಭಿನಯ ವಾಚಿಕೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

ಪ್ರಸ್ತುತ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಫೋಟೋಗ್ರಫಿ, ಸಂಗೀತ, ಅನುವಾದ, ಚಿತ್ರಕಲೆ, ಇವರ ಆಸಕ್ತಿಯ ಕ್ಷೇತ್ರಗಳು.

ಕೃತಿಗಳು: ಮಾಬೂನ ಪದ್ಯ ಮತ್ತು ಗದ್ಯ (ಸಂಪಾದಿತ ಕೃತಿ)
ಭವದ ಅಗುಳಿ (ಕವನ ಸಂಕಲನ)

ಸಂತೋಷ ಅಂಗಡಿ