ಸಂಗೀತಾ ಮಠಪತಿಯವರು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದವರು. ತಂದೆ ಹಣಮಂತ, ತಾಯಿ ಗುರುಬಾಯಿ. ಹುಟ್ಟೂರಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣ ಪೂರೈಸಿ, ಮುಧೂಳ ತಾಲೂಕಿನ ಯಡಹಳ್ಳಿಯಲ್ಲಿ ಪಿಯುಸಿ, ಮುಧೋಳ ದಲ್ಲಿ ಬಿ.ಎಸ್ ಸಿ ಪದವಿ , ನಂತರ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಎಂ.ಎಸ್.ಸಿ (ಆಹಾರ ಸಂಸ್ಕರಣೆ ಮತ್ತು ಪೋಷಣೆ ವಿಭಾಗ) ಸ್ನಾತಕೋತ್ತರ ಪದವಿ ಪಡೆದರು. ಸಂಗೀತಾ ಅವರು ಉತ್ತಮ ನಿರೂಪಕಿಯೂ ಹೌದು. ಸದ್ಯ ವಿಜಯಪುರದಲ್ಲಿ ವಾಸವಾಗಿದ್ದಾರೆ.
ಸಾಹಿತ್ಯ,ಸಂಗೀತ,ಕಲಾರಂಗ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ವಿಜಯಪುರ ಜಿಲ್ಲಾ ಘಟಕ ಮಹಿಳಾ ಕಾರ್ಯದರ್ಶಿಯಾಗಿದ್ದು, ಯೋಗ ತರಬೇತಿ ಹಾಗೂ ಮಹಿಳಾ ಉದ್ಯಮಶೀಲತಾ ಅಭಿವೃದ್ದಿ ತರಬೇತಿ ಪಡೆದಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ, ಹಲವು ಪ್ರಶಸ್ತಿಗಳನ್ನುಮತ್ತು ವಿಪತ್ತು ನಿರ್ವಹಣಾ ತರಬೇತಿ ಪಡೆದಿದ್ದಾರೆ. ವ್ಯಕ್ತಿತ್ವ ವಿಕಸನ, ಬದುಕುವ ಕಲೆ, ಮಾನವನ ಮನಸ್ಸು ಮತ್ತು ಸ್ವಭಾವಗಳು, ವಿಪತ್ತು ನಿರ್ವಹಣೆ ವಿಷಯಗಳ ಮೇಲೆ ಹಲವಾರು ತರಬೇತಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಜಾನಪದ ಗೀತೆ, ದಾಸ ಸಾಹಿತ್ಯ, ಜಾನಪದ ನೃತ್ಯ, ಏಕ ಪಾತ್ರಾಭಿನಯ, ಅಭಿನಯ ಗೀತೆ, ನಾಟಕದಲ್ಲಿ ಅಭಿನಯ ಇವರ ಆಸಕ್ತಿ ಕ್ಷೇತ್ರಗಳು. ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನ-ಕಥೆ-ಕವನಗಳು ಪ್ರಕಟವಾಗಿವೆ.
ಕೃತಿಗಳು: ರಾಮಾಮೃತ (ವಚನ ಸಂಕಲನ), ಭಾವಾಮೃತ (ಕವನ ಸಂಕಲನ), ಸತ್ಯಾಮೃತ ( ಸ್ವರಚಿತ ಅಬಾಬಿ ಸಂಕಲನ)