ಲೇಖಕ-ಕವಿ ಡಾ.ಸಂಗಮೇಶ್ವರ ಪಾಟೀಲ ( ಸಂಪಾ) ಅವರು ಮೂಲತಃ (ಜನನ: 21-05-1970) ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಎಂ.ಎ , ಎಂ.ಎಡ್ , ಎಂ.ಫಿಲ್, ಪಿ.ಹೆಚ್ ಡಿ.ಪದವೀಧರರು. ಕಳೆದ 21 ವರ್ಷಗಳಿಂದ ಕೊಪ್ಪಳ, ಉಜಿರೆ (ಧರ್ಮಸ್ಥಳ), ಸೇವೆ ಸಲ್ಲಿಸಿ, ಸದ್ಯ, ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿದ್ದಾರೆ. ‘ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾಗಿ, ಮುನಿರಾಬಾದ್ ಡಯಟ್ ನಲ್ಲಿ ಆಡಳಿತ ಪರಿಷತ್ ಸದಸ್ಯರಾಗಿಯೂ ಸೇವೆ.ಸಲ್ಲಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಭಾಗ್ಯನಗರದಲ್ಲಿ ವಾಸವಾಗಿದ್ದಾರೆ.