ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಸಹಾಯಕಿ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿರುವ ಸಾಯಿಲಕ್ಷ್ಮಿಯವರು ಮೂಲತಃ ಬೆಂಗಳೂರಿನವರು. ಮಕ್ಕಳ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡವರು. ಅಲ್ಲದೇ ಲಘು ಶೈಲಿಯ ಬರಹಗಾರರು. ಇವರ ಮಕ್ಕಳ ಗೀತರೂಪಕಗಳ ಕೃತಿ ಮತ್ತು ಹಾಸ್ಯ ಬರಹಗಳ ಮೂರು ಸಂಕಲನಗಳು ಓದುಗರ ಮೆಚ್ಚುಗೆಯನ್ನು ಗಳಿಸಿವೆ.
ಆಕಾಶವಾಣಿ ಮಾಧ್ಯಮದಲ್ಲಿ ವಿವಿಧ ನುಡಿ ಪ್ರಯೋಗ, ಮಕ್ಕಳ ರಂಗ ಪ್ರಯೋಗಕ್ಕೆ ಮುನ್ನುಡಿ ಬರೆದಿರುವ ಸಾಯಿಲಕ್ಷ್ಮಿ. ಎಸ್. ಆಕಾಶವಾಣಿಯ ತಮ್ಮ 'ಸರ್ಕಸ್ ಆನೆ ನಲ್ಲಿ' ಮಕ್ಕಳ ಈ ಗೀತ ರೂಪಕ ರಚನೆ ಹಾಗೂ ನಿರ್ಮಾಣಕ್ಕೆ ಆಕಾಶವಾಣಿ ಕೊಡುವ ರಾಷ್ಟ್ರೀಯ ಪುರಸ್ಕಾರವೂ ದೊರೆತಿದೆ. ಬಾನುಲಿಯ ತಮ್ಮ ಆಶಕ್ತದಾಯಕ ವೃತ್ತಿಯಲ್ಲಿ ಬೆಳ್ಳಿ ಹಬ್ಬ ಪೂರೈಸಿದ ಸಾಯಿಲಕ್ಷ್ಮಿರಿಗೆ ಸಂಗೀತ ಮತ್ತು ಸಾಹಿತ್ಯ, ಅವರಿಗೆ ಪ್ರೀಯವಾದ ಕೇತ್ರಗಳು. ಹೀಗೆಯೇ ಸಾಗಿರುವ ಸಾಯಿಲಕ್ಷ್ಮಿಯವರ ಬದುಕಿನ ಪಯಣದಲ್ಲಿ 'ಹೂಬತ್ತಿ' ಅವರ ಮೊದಲ ಕಾದಂಬರಿಯಾಗಿದೆ.