ಎಸ್.ಎಂ ಹುಣಸ್ಯಾಳರ ಪೂರ್ಣ ಹೆಸರು ಸೊಲಬಣ್ಣ ಮಹಾಲಿಂಗಪ್ಪ ಹುಣಸ್ಯಾಳ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಹಾಲಿಂಗಪುರದವರು. ತಂದೆ ಮಹಾಲಿಂಗಪ್ಪ, ತಾಯಿ ಗುರುಲಿಂಗಮ್ಮ. 1 ರಿಂದ 4ನೇ ತರಗತಿಯವರೆಗೂ ಮಹಾಲಿಂಗಪುರ ಮತ್ತು ಬನಹಟ್ಟಿಯಲ್ಲಿ ಶಿಕ್ಷಣ ಪೂರೈಸಿ, 1930ರಲ್ಲಿ ಬೆಳಗಾವಿಯ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ ‘ಅರಟಾಳ ಗಿಲಗಂಚಿ’ ಮಾಧ್ಯಮಿಕ ಶಾಲೆಯಲ್ಲಿ 5ನೇ ತರಗತಿಯಿಂದ ಶಿಕ್ಷಣ ಹಾಗೂ ಧಾರವಾಡದಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ನಂತರ, ಬಿ.ಇಡಿ ಮತ್ತು ಎಂ.ಎ ಪೂರ್ಣಗೊಳಿಸಿದರು.
1954ರಲ್ಲಿ ಲಖನೌ ವಿಶ್ವವಿದ್ಯಾಲಯದಲ್ಲಿ ‘The VIRASHAIVA PHILOSOPHY’ ವಿಷಯದ ಮೇಲೆ ಪಿಎಚ್.ಡಿ ಪಡೆದರು. ವೀರಶೈವ ಸಾಹಿತ್ಯವನ್ನು ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಹಲವಾರು ಕೃತಿಗಳನ್ನುರಚಿಸಿದ್ದಾರೆ. ಅವುಗಳಲ್ಲಿ Recent Development in Education The Veera Shiva Social Philosophy(1957), Women saints of Karnataka History of-1970, Education in Hyderabad Karnataka(1973), The Lingayat Movement. A Social Revolution in Karnataka (2004 ) Philosophy of the Aagamas and the vachanas, The Indian Reformation(In Preparation), Historical Capitals in Karnataka. ಭಾರತದ ಸಂಸ್ಕೃತಿ (ಪ್ರಾಚೀನ, ಮಧ್ಯಕಾಲಿಕ, ಆವಾರ್ಚಿನ) ಇತಿಹಾಸ ಭಾಗ -1,2,3, ಸಚಿತ್ರ ಭಾರತದ ಇತಿಹಾಸ - ಭಾಗ 1,2,3 ಕೃತಿಗಳನ್ನು ರಚಿಸಿದ್ದಾರೆ. ಪುರಾತನ ವಚನ ಸಂಕಲನ-1964, ಬಸವಸ್ತೋತ್ರದ ವಚನ ಮತ್ತು ಪ್ರಶಸ್ತಿ-1965, ಬಸವಾದಿ ಗಣಚರಿತ್ರೆ ಮತ್ತು ಗಣವಚನ ಮಂಜರಿ-1968, ಬಸವೇಶ್ವರರ ಸಮಕಾಲೀನರು- 1968, ಶರಣೆಯರ ವಚನಗಳು- 1969, ಪುರಾತನ ಶರಣೆಯರ ವಚನಗಳು, ಬಸವೇಶ್ವರ ದೇವರ ವಚನ ವ್ಯಾಖ್ಯಾನ ಭಾಗ 1,2 ಹೀಗೆ ಅನೇಕ ಕೃತಿಗಳ ಸಂಪಾದನೆಯನ್ನು ಮಾಡಿದ್ದಾರೆ. ವಿಚಾರ ತರಂಗ-1969, ಗಾಂಧಿ ತತ್ವ ಸ್ಮರಣೆ- 1969, ಜೀವನರಂಗ - 1971, ಅಂತಃಕರಣ- 1973 ಇವರ ಪ್ರಮುಖ ಕವನ ಸಂಕಲನಗಳು.