ರೇಶ್ಮಾ ಗುಳೇದಗುಡ್ಡಾಕರ್ ವಿಜ್ಞಾನದ ಪದವಿ ಮತ್ತು ಬಿಯಡ್ ಪದವಿ ಪೂರ್ಣಗೊಳಿಸಿದ್ದಾರೆ . ಪುಸ್ತಕಗಳ ಓದು ಜೊತೆಗೆ ಕವಿತೆ, ಲೇಖನ ಬರೆಯುವದು ಅವರ ಮೆಚ್ಚಿನ ಹವ್ಯಾಸ. 2006 ರ ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಹೊತ್ತಿಗೆ "ಕವಿತೆ - 2006 " ರಲ್ಲಿ ಗಾಂಧಿ ಕವನ ಪ್ರಕಟವಾಗಿದೆ. ಇದಕ್ಕೂ ಮೊದಲು ಗಾಂಧಿ ಕವನ ಹೊಸತು ಪತ್ರಿಕೆಯಲ್ಲಿ ಪ್ರಕಟವಾಗಿದೆ. ಅಂತರ್ಜಾಲ ಪತ್ರಿಕೆಗಳು ಮತ್ತು ಬ್ಲಾಗ್ ಗಳಲ್ಲಿ ಬರೆಯುವ ಅವರ ಬರಹಗಳು ಪಂಜು, ಅವಧಿ, ಸಂಗಾತಿ, ಆಕೃತಿ, ನಸುಕು, ಪ್ರತಿಲಿಪಿ ಗಳಲ್ಲಿ ಪ್ರಕಟವಾಗಿವೆ. ಅವರ ಮೊದಲ ಕವನ ಸಂಕಲನ ‘ತಂಗುದಾಣ ಬೇಕು ಬದುಕಿಗೆ’ ಪ್ರಕಟಗೊಂಡಿದೆ.