ಗುಲ್ಬರ್ಗಾ ಜಿಲ್ಲೆಯ ಚಿಂಚೋಳಿ ಮೂಲದವರಾದ ರೇಣುಕಾ ಹೆಳವರ, 10-10-1982ರಂದು ಜನಿಸಿದರು. ರಾಜ್ಯಶಾಸ್ತ್ರ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಪೊಲೀಸ್ ಇಲಾಖೆಯಲ್ಲಿ 2005ರಿಂದ ಡಬ್ಲ್ಯು ಪಿ.ಸಿಯಾಗಿ ಕಾರ್ಯ ನಿರ್ವಹಿಸಿದ್ದ ಅವರು, ಸದ್ಯ ವಿಶ್ವವಿದ್ಯಾಲಯ ಪೋಲಿಸ್ ಠಾಣೆ ಕಲಬುರಗಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. - ಕವಿತೆ, ಕಥೆ, ಲೇಖನ ಬರೆಯುವುದು, ಓದುವುದು ಇವರ ಪ್ರಮುಖ ಹವ್ಯಾಸಗಳು. 2014ರಲ್ಲಿ ಪ್ರಕಟಗೊಂಡ ಇವರ ‘ಬೆಳಕ ಮರೆಯ ಬೆಂಕಿ’ ಕವನ ಸಂಕಲನವು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರೋತ್ಸಾಹ ಧನ ಪಡೆದಿದೆ. ಎರಡನೆಯ ಪುಸ್ತಕ ಕಥಾಸಂಕಲನ ‘ಕಿಟಕಿಯಂಚಿನ ಮೌನ’ ಅಚ್ಚಿನಲ್ಲಿದೆ. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿ ನಿಧಿ ಪ್ರಶಸ್ತಿ. ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಅವರು ನೀಡುವ ಅಂತಾರಾಷ್ಟ್ರೀಯ ಮಹಿಳಾ ದತ್ತಿ ಪ್ರಶಸ್ತಿ ಯುವಜನಸೇವೆ ಹಾಗೂ ಸಚಿವಾಲಯ, ನೆಹೆರು ಯುವ ಕೇಂದ್ರ ಮತ್ತು ಸದ್ಭಾವನಾ ಫೌಂಡೇಷನ್‌ಸಹಯೋಗದ ಸದ್ಭಾವನಾ ಪ್ರಶಸ್ತಿ ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿಸಂದಿವೆ.