ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಡಿಪ್ಲೊಮಾ ಪದವೀಧರರು. ಪ್ರಸ್ತುತ ಮಂಗಳೂರಿನ ಎಂ.ಆರ್.ಪಿ.ಎಲ್ ಸಂಸ್ಥೆಯಲ್ಲಿ ಮ್ಯಾನೇಜರ್ ಎಂದು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಸೇರಿದಂತೆ 50ಕ್ಕೂ ಹೆಚ್ಚು ಭಾವಗೀತೆಗಳಿಗೆ ಧ್ವನಿಸುರುಳಿಯನ್ನು ನೀಡಿರುತ್ತಾರೆ.
ಕೃತಿಗಳು : ಇರುವುದೆಲ್ಲವ ಬಿಟ್ಟು (ಕವನ ಸಂಕಲನ) , ಮುಸುಕು ತೆರೆದು (ಕವನ ಸಂಕಲನ), ತೂಗುದೀಪ (ಕವನಸಂಕಲನ).