ರಮೇಶ ಅಂಚಲ್ಕರ್ ಮೂಲತಃ ಕನಕಪುರದವರು. ತಂದೆ ನಾಗಭೂಷಣ ರಾವ್, ತಾಯಿ- ಸರಸ್ವತಿ ಬಾಯಿ. ಇವರ ಮಾತೃಭಾಷೆ ಮರಾಠಿ. ಪ್ರಾಥಮಿಕ ಶಿಕ್ಷಣವನ್ನು ದಯಾನಂದ ವಸತಿ ವಿದ್ಯಾಲಯ ಹಾಗೂ ಪ್ರೌಢ ಶಿಕ್ಷಣವನ್ನು ಮುನಿಸಿಪಲ್ ಹೈಸ್ಕೂಲ್ ನಲ್ಲಿ ಪೂರ್ಣಗೊಳಿಸಿದರು. ಕನಕಪುರದ ರೂರಲ್ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದರು. ಓದಿನ ಜೊತೆಗೆ ರೆಡಿಮೇಡ್ ಗಾರ್ಮೆಟ್ಸ್ ಅಂಗಡಿಯಲ್ಲಿ ಐದು ವರ್ಷ ಸೇಲ್ಸ್ ಮ್ಯಾನ್ ಕೆಲಸ ನಿರ್ವಹಿಸುತ್ತಿದ್ದ ಅವರು, ಖಾಸಗಿ ಕಂಪನಿಯಲ್ಲಿ ಲೆಕ್ಕ ಪರಿಶೋಧಕರಾಗಿಯೂ ಕೆಲಸ ಮಾಡಿದ್ದಾರೆ. ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ.ಕಾಂ. ಪದವಿ ಪಡೆದರು.
ಪ್ರಸ್ತುತ ಅಂತಾರಾಷ್ಟ್ರೀಯ ಕಂಪನಿಯಲ್ಲಿ ’ಬಿಸಿನೆಸ್ ಹೆಡ್’ ಆಗಿದ್ದು, ಬೆಂಗಳೂರಿನ ಆಡುಗೋಡಿಯಲ್ಲಿ ವಾಸವಾಗಿದ್ದಾರೆ. ಹನಿಗವನ, ಕವಿತೆ ಬರೆಯುವುದು ಇವರ ಹವ್ಯಾಸ. 'ಭಾವಜೀವಿಯ ಅಂತರಂಗ' ಇವರ ಪ್ರಕಟಿತ ಕವನ ಸಂಕಲನ.