About the Author

ಲೇಖಕ ರಾಮಕೃಷ್ಣ ಕಟ್ಕಾವಲಿ ಮೂಲತಃ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಸುಂಕೇಶ್ವರ ಗ್ರಾಮದವರು. ಎಂ.ಎಸ್.ಸಿ, ಎಂ.ಇಡಿ ಪದವೀಧರರು. ಕತೆ, ಕವನ, ಲೇಖನಗಳನ್ನು ಬರೆಹ ಅವರ ಹವ್ಯಾಸ. ಸಾಹಿತ್ಯ, ವಿಜ್ಞಾನ, ಕ್ರೀಡೆ ಅವರ ಆಸಕ್ತಿಗಳು. ಸ್ವತಃ ಕ್ರೀಡಾ ಪಟುವಾಗಿದ್ದು ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಮತ್ತು ಯೋಗ ತರಬೇತಿಗಳು ಆಯೋಜಿಸುತ್ತಾರೆ‌. ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ರಸ್ತಾಪುರ ಸರಕಾರಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿದ್ದಾರೆ.

ರಾಮಕೃಷ್ಣ ಕಟ್ಕಾವಲಿ

Stories/Poems