ಬಸವಕಲ್ಯಾಣದ ಪತ್ರಕರ್ತ ಹಾಗೂ ಯುವ ಬರಹಗಾರ ರಾಜೇಂದ್ರ ಎಲ್.ಗೋಖಲೆ ಅವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ (ಬಿ) ಗ್ರಾಮದವರು. ತಂದೆ ಲಕ್ಷ್ಮಣ, ತಾಯಿ ರತ್ನಮ್ಮ. ಚಿತ್ರ ಕಲೆಯಲ್ಲಿ ಬಿ.ಎಫ್.ಎ ಪದವೀಧರರು. 2002 ರಿಂದ ಪತ್ರಕರ್ತರು. ಬೀದರದ 'ಅಶೋಕಾ ಕೋಟೆ', :ಯುವ ರಂಗ', ಹಾಗೂ ಕಲಬುರ್ಗಿಯ 'ಕ್ರಾಂತಿ' ಮತ್ತು 'ಸಂಜೆವಾಣಿ', ಪತ್ರಿಕೆಗಳ ಬಸವಕಲ್ಯಾಣ ತಾಲೂಕು ವರದಿಗಾರರು. ಸದ್ಯ 'ಕಲ್ಯಾಣ ಜಂಗ್ ' ದಿನ ಪತ್ರಿಕೆಯ ಸಂಪಾದಕರಾಗಿದ್ದಾರೆ. 2014 ರಿಂದ 2018 ರ ವರೆಗೆ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಸವಕಲ್ಯಾಣ ತಾಲೂಕು ಅಧ್ಯಕ್ಷರಾಗಿದ್ದರು.
ಕೃತಿಗಳು: ಮಚ್ವೇಂದ್ರ ಅಣಕಲ್' ಅವರ ‘ದಲಿತ ಸಂವೇದನೆಯ ಕತೆಗಳು ' ಎಂಬ ಕಥಾ ಸಂಕಲನದ ಸಂಪಾದಕರು. ಇವರಿಗೆ ಕನ್ನಡ ಪರ ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.