ರಜನಿಕಾಂತ ಬರೂಡೆ ಕಲಬುರಗಿ ಜಿಲ್ಲೆಯವರು. ಬಿ.ಎ. ಪದವೀಧರರು. ಪೋಲಿಸ್ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ನಗರ ವಿಶೇಷ ಶಾಖೆ (GSB) ಕಲಬುರಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯೊಂದಿಗೆ ಬರವಣಿಗೆಯಲ್ಲೂ ಆಸಕ್ತಿ. ರಜನಿಕಾಂತ ಅವರಿಗೆ ಎಸ್. ರಾಯಡು ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಬೆಂಗಳೂರು ಅವರ ಸಾಹಿತ್ಯ ಪ್ರಶಸ್ತಿ (2017), ರಾಜ್ಯ ಮಟ್ಟದ 17ನೇ ಚುಟುಕು ಸಮ್ಮೇಳನದಲ್ಲಿ ʻಕಾವ್ಯ ಪ್ರಶಸ್ತಿʼ ಹೀಗೆ ಹಲವಾರು ಗೌರವಗಳು ಸಂದಿವೆ. ಕೃತಿಗಳು: ಎದೆಯಾಳದ ಹನಿಗಳು (ಹನಿಗವನಗಳ ಸಂಕಲನ), ನನ್ನ ಊರು...ನನ್ನ ಜನ, ಹನಿ ಕಹಾನಿ (ಹನಿಗವನಗಳ ಸಂಕಲನ)