ಸಮಾಜಶಾಸ್ತ್ರಜ್ಞೆ, ಸಾಹಿತಿ ಆರ್. ಇಂದಿರಾ ಅವರು ಜನಿಸಿದ್ದು 1952 ಏಪ್ರಿಲ್ 22ರಂದು. ಮೂಲತಃ ಮೈಸೂರಿನವರಾದ ಇಂದಿರಾ ಅವರು ಮೈಸೂರು ವಿಶ್ವವಿದ್ಯಾಲಯ ಸಮಾಜಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ, ಮಹಿಳಾ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಭಾರತೀಯ ಸಮಾಜಶಾಸ್ತ್ರ ಸಂಘದ ಅಧ್ಯಕ್ಷರಾಗಿ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯದ ದಿ ಸೆಕೆಂಡ್ ಕೊರ್ಟ್‌ನ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ಭಾರತೀಯ ಸಮಾಜ ಇವರ ಪ್ರಮುಖ ಕೃತಿಯಾಗಿದೆ. ಇವರಿಗೆ ಎಚ್.ಎಸ್. ಪಾರ್ವತಿ ದತ್ತಿ ಪ್ರಶಸ್ತಿ ಒಲಿದು ಬಂದಿದೆ.