ಲೇಖಕ ಪ್ರವೀಣ ಪೋಲಿಸ ಪಾಟೀಲ ಅವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತರಲಕಟ್ಟಿ ಗ್ರಾಮದವರು. ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಪದವಿ ಪೂರೈಸಿ, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಪದವಿ ಪಡೆದು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 'ಆಧುನಿಕ ಕನ್ನಡ ರಂಗಭೂಮಿ ಮತ್ತು ರಂಗಪ್ರಯೋಗಗಳು' ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದಿದ್ದಾರೆ. ಇವರು, ರಂಗಕಲಾವಿದರೂ ಹೌದು. ಕ್ರೈಸ್ಟ್ ಕಾಲೇಜಿನ ಬೇಂದ್ರೆ ಕಾವ್ಯ ಪುರಸ್ಕಾರ ಹಾಗೂ ಅ.ನ.ಕೃ. ಕಥಾ ಪುರಸ್ಕಾರಗಳನ್ನು ಪಡೆದಿದ್ದಾರೆ. ಅವರ 'ನಿರ್ದೇಶಕಿಯಾದ ನನ್ನವ್ವ' ಕಥೆಯು, ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಿ.ಕಾಂ. ಪದವಿಯ ಎರಡನೆಯ ಸೆಮಿಸ್ಟರ್ ಗೆ 2016 ರಿಂದ ಕನ್ನಡ ಸಾಮಾನ್ಯ ಪಠ್ಯವಾಗಿದೆ.