ಪ್ರತಿಭಾ ನಾಡಿಗೇರ್ - ಶಿವಮೊಗ್ಗದಲ್ಲಿ ಹುಟ್ಟಿ, ಮುಂಬೈನಲ್ಲಿ ಬೆಳೆದು, ದುಬೈನಲ್ಲಿ 23 ವರ್ಷಗಳ ಕಾಲ ಶಿಕ್ಷಣ ಹಾಗೂ ಪತ್ರಿಕೋದ್ಯಮದ ಕ್ಷೇತ್ರದಲ್ಲಿ ದುಡಿದು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮುಂಬೈನ ಪದವಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿದ್ದು, ಯು.ಎ.ಇ. (The Indian High School, Dubai) ನ ಪೂರ್ವ ಪದವಿ ವಿಭಾಗದಲ್ಲಿ 13 ವರ್ಷ ಕೆಲಸ ಮಾಡಿ ಅಲ್ಲಿ ಎರಡು ಸಾರಿ Best Teacher ಪ್ರಶಸ್ತಿಯನ್ನು ಪಡೆದಿದ್ದಾರೆ. 2000 ದಲ್ಲಿ ದುಬೈನ Khaleej Tirnes ಸೇರಿ, ನೂರಾರು ಲೇಖನಗಳನ್ನು ಬರೆದಿದ್ದಾರೆ. ಇವರು ಸಂದರ್ಶಿಸಿದ ವ್ಯಕ್ತಿಗಳಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ರಾಷ್ಟ್ರಪತಿ, ಎಫ್. ಡಬ್ಲೂ. ಡ ಕ್ಲರ್ಕ್, ಸೌದಿ ಅರೇಬಿಯಾದ ಪಿನೆಸ್ ರೀಮ್ ಅಲ್ ಫೈಸಲ್, ಆದಿ ಗೋದ್ರೆಜ್, ಎಂ.ಎಫ್. ಹುಸೇನ್ ಮೊದಲಾದವರು ಪ್ರಮುಖರು. ದುಬೈ ಸರ್ಕಾರದಿಂದ ಇವರು 2008 ಹಾಗೂ 2009 ರಲ್ಲಿ Best Feature Writer ಪುರಸ್ಕಾರವನ್ನು ಪಡೆದಿದ್ದಾರೆ. ರೋರಾಟಿಯನ್ ಸಮುದಾಯದ ಗಣ್ಯ ವ್ಯಕ್ತಿಗಳ ಬಗ್ಗೆ ಎರಡು ಪುಸ್ತಕಗಳನ್ನು ಸಂಪಾದಿಸಿದ್ದಾರೆ.