ಪಂಚಮಿ ಕುಮಾರಿ ಬಾಕಿಲಪದವು ಶಾಲಾದಿನಗಳಿಂದಲೇ ಕವಿತೆ ಬರೆಯಲು ಶುರುಮಾಡಿದ ಬಹುಮುಖ ಪ್ರತಿಭೆ. ಪ್ರಥಮ ಪಿ.ಯು.ಸಿ ವ್ಯಾಸಂಗದ ವೇಳೆಯೇ 'ಆರಾಧನೆ' ಎಂಬ ಕವನ ಸಂಕಲನವನ್ನು ಪ್ರಕಟಿಸಿರುವ ಪಂಚಮಿ ಕುಮಾರಿ, ಕಥಾ ರಚನೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕವಿತೆ, ಕಥೆರಚನೆಯಲ್ಲಿ ಒಲವಿರುವ ಪಂಚಮಿ ಸಂಗೀತಾಭ್ಯಾಸವನ್ನು ಮಾಡುತ್ತಿದ್ದಾರೆ.