ಲೇಖಕಿ ಪಿ ಸಂಗೀತ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ರೈತಾಪಿ ಕುಟುಂಬದವರು. ಹೊಸಕೋಟೆಯ ಬ್ರೈಟ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಂಗಳೂರಿನ ವಿಜಯಾ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಕ್ರೈಸ್ಟ್ ಕಾಲೇಜಿನಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣ, ಬೆಂಗಳೂರು ವಿ.ವಿ.ಯಿಂದ ಕನ್ನಡ ಎಂ.ಎ ಹಾಗೂ ನವದೆಹಲಿಯ ಸಿಕ್ಪಕಿಂ ಮಣಿಪಾಲ್ ವಿ.ವಿ.ಯಲ್ಲಿ ಎಕಾಲಜಿ ಪದವಿ ಪಡೆದಿದ್ದಾರೆ. ಕನ್ನಡ ಎಂ.ಎ ಪದವಿಯಲ್ಲಿ ಕುವೆಂಪು ಚಿನ್ನದ ಪದಕ ಮತ್ತು ಜಿ.ಎಸ್. ಶಿವರುದ್ರಪ್ಪ ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ಕೇಂದ್ರದಿಂದ ಭಾಷಾಂತರ ಅಧ್ಯಯನ ಹಾಗೂ ಪುರಾತತ್ವ ಮತ್ತು ಪ್ರವಾಸೋದ್ಯಮ ಡಿಪ್ಲೊಮಾಗಳನ್ನು, ಎಂ.ಫಿಲ್ ಮತ್ತು ಪಿ.ಎಚ್.ಡಿ ಪದವಿಗಳನ್ನು ಕನ್ನಡ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ‘ಬೇಂದ್ರೆ- ಕುವೆಂಪು ಕೃತಿಗಳಲ್ಲಿ ಪರಿಸರದ ಪ್ರಶ್ನೆಗಳು’ ಎಂಬ ವಿಷಯವಾಗಿ ಪಿ. ಹೆಚ್.ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ, ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.
ಕೃತಿಗಳು : ಮಾತನಾಡುವ ಹಕ್ಕಿ (ಅನುವಾದ), ಗಣಿಗಾರಿಕೆ ಮತ್ತು ಪರಿಸರ ( ಸಂಶೋಧನೆ), ನಿತ್ಯ ಕಿಶೋರತೆ (ಸಂಶೋಧನೆ), ಕಾದಂಬರಿ ಸಾರ್ವಭೌಮ ಅ. ನ.ಕೃಷ್ಣರಾಯ (ಜೀವನಚಿತ್ರ)