ಲೇಖಕಿ ಕುಸುಮಬಾಲೆ ಎಂಬ ಹೆಸರಿನಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಪಿ. ಕುಸುಮ ಆಯರಹಳ್ಳಿ ಅವರು ನಂಜನಗೂಡಿನವರು. ಚಾಮರಾಜನಗರದ ಅಜ್ಜಿಯ ಮನೆಯಲ್ಲಿ ಬೆಳೆದ ಅವರು, ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಎಂ.ಎ.ಪದವೀಧರರು. ಆಕಾಶವಾಣಿಯಲ್ಲಿ ಉದ್ಯೋಷಕಿಯಾಗಿ, ಅನೇಕ ಧಾರಾವಾಹಿಗಳಿಗೆ ಸಂಭಾಷಣೆಯನ್ನು ಒದಗಿಸಿದ್ದು, ನಾಡಿನ ಅನೇಕ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಸಣ್ಣಕಥಾ ಕ್ಷೇತ್ರದಲ್ಲೂ ಕೈಯಾಡಿಸಿ, ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ನಿಯತವಾಗಿ ಅಂಕಣವನ್ನು ಬರೆಯುತ್ತಾ 'ಕುಸುಮಬಾಲೆ' ಎಂಬ ಕಾವ್ಯನಾಮದಿಂದ ಪ್ರಸಿದ್ದರು. ಜೊತೆಗೆ ಅವರ ಅಂಕಣ ಬರಹಗಳ ಸಂಕಲನ 'ಯೋಳೀನ್‌ಕೇಳಿ' ಪ್ರಕಟವಾಗಿದ್ದು, 2018ನೇ ಸಾಲಿನ 'ಡಾ.ಹಾಮಾನಾ ಯುವ ಪ್ರಶಸ್ತಿ' ದೊರೆತಿದೆ. ಕೃಷಿ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದಾರೆ.