About the Author

ಕಾದಂಬರಿಕಾರ ನವರತ್ನರಾಂ ಅವರು ಬೆಂಗಳೂರಿನಲ್ಲಿ 1932 ಡಿಸೆಂಬರ್‌ 3ರಂದು ಜನಿಸಿದರು. ತಾಯಿ ಪುಟ್ಟಮ್ಮ. ತಂದೆ ನವರತ್ನರಾಮರಾವ್‌. ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಸರ್ಕಾರಿ ಕಾಲೇಜಿನಲ್ಲಿ ಇಂಟರ್‌ ಮೀಡಿಯೆಟ್‌ ಶಿಕ್ಷಣ ಮುಗಿಸಿದರು. ಕಲಾ ಮಂದಿರದ ಮಿತ್ರರೊಡಗೂಡಿ ‘ಚಿತ್ರ ಕಲಾವಿದರು’ ತಂಡ ಕಟ್ಟಿ ನಾಟಕ ರಚನೆಯಲ್ಲಿ ತೊಡಗಿಸಿಕೊಂಡರು. ಅಕ್ಕಪಕ್ಕ, ಕೆಂಬೂತ, ಕನಸು-ನನಸು ಸೇರಿದಂತೆ ಐವತ್ತಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ.  

ಪ್ಯಾರಿಸ್ಸಿನಿಂದ ಪ್ರೇಯಸಿಗೆ, ನವರತ್ನ ರಾಮಾಯಣ, ಹೂವೊಂದು ದುಂಬಿ ನೂರೊಂದು, ಜಗವೆಲ್ಲ ಒಂದೇ ಸಿವ, ನೆರೆಹೊರೆಯವರ ಹೊರೆ, ಹಾಲು-ಹಾಲಾಹಲ, ಕಲ್ಲರಳಿ ಹೂವಾಯಿತು, ಜಿವ ಯಾವ ಕುಲ ಆತ್ಮ ಯಾವ ಕುಲ ಇವರ ಪ್ರಮುಖ ಕೃತಿಗಳು. ಇವರು ಪುಟ್ಟಣ್ಣ ಕಣಗಾಲ ನಿರ್ದೇಶನದ ಗೆಜ್ಜೆ ಪೂಜೆ, ಉಪಾಸನೆ ಚಿತ್ರಗಳಿಗೆ ಸಂಭಾಷಣೆಯನ್ನು ಬರೆದಿದ್ದರು. ಇವರು 1991 ಅಕ್ಟೋಬರ್‌ 17ರಂದು ನಿಧನರಾದರು.

ನವರತ್ನರಾಂ

(03 Dec 1932-17 Oct 1991)