ನರೇಂದ್ರ ಕಬ್ಬಿನಾಲೆ ಅವರು ವಾಣಿಜ್ಯದಲ್ಲಿ ಪದವಿ, ಹಣಕಾಸು ವಿಷಯದಲ್ಲಿ ಎಂಬಿಎ ಮತ್ತು ಹಣಕಾಸು ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು ಹೊಂದಿದ್ದಾರೆ. ಚಲನಚಿತ್ರೋದ್ಯಮದಲ್ಲಿ ಕಾರ್ಯನಿರ್ವಾಹಕ ನಿರ್ಮಾಪಕ ಮತ್ತು ನಿರ್ಮಾಣ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಕಥೆ ಬರವಣಿಗೆ, ಸಾಹಿತ್ಯ ಮತ್ತು 7 ವಿವಿಧ ಭಾರತೀಯ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯ ಹೊಂದಿರುವ ಅವರು ರಂಗಭೂಮಿ ಹಿನ್ನೆಲೆಯೊಂದಿಗೆ ಅನೇಕ ನಾಟಕಗಳು ಮತ್ತು ಕನ್ನಡ ಚಲನಚಿತ್ರಗಳು ಮತ್ತು ವೆಬ್‌ಸರಣಿಗಳಲ್ಲಿ ನಟಿಸಿದ್ದಾರೆ. ಅಷ್ಟೇಅಲ್ಲದೆ ಅನೇಕ ಭಕ್ತಿ ಮತ್ತು ಭಾವಗೀತೆಗಳು ಮತ್ತು ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ.