ಲೇಖಕ ನರಸಿಂಹೇಗೌಡ ನಾರಣಾಪುರ ಅವರು ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕು, ಮೇಲುಕೋಟೆಯ ನಾರಣಾಪುರದವರು. ಕೃಷಿಕರು. ತಂದೆ ಬೆಟ್ಟೇಗೌಡ, ತಾಯಿ ನಿಂಗಮ್ಮ. ಎಂ.ಎ., ಎಂ.ಇಡಿ., ಪದವೀಧರರು. 1988ರಲ್ಲಿ ಕೆ.ಜಿ.ಎಫ್‌ನಲ್ಲಿರುವ ಪ್ರಥಮ ದರ್ಜೆ ಕಾಲೇಜು, ಉರಿಗಾಂನಲ್ಲಿ ಕನ್ನಡ ಆಯ್ಕೆ ಶ್ರೇಣಿ ಉಪನ್ಯಾಸಕರಾಗಿ, ವಿಭಾಗದ ಮುಖ್ಯಸ್ಥರಾಗಿ, 2015ರಲ್ಲಿ ನಿವೃತ್ತರಾದರು. ಕರ್ನಾಟಕ ಜಾನಪದ ಅಕಾಡೆಮಿ ಹೊರತಂದಿರುವ ಕನ್ನಡ ಜಾನಪದ ನಿಘಂಟಿನ ಕ್ಷೇತ್ರ ಸಹಾಯಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕೆ.ಜಿ.ಎಫ್' ವಿಶೇಷ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಕೆ.ಜಿ.ಎಫ್‌ನ ಕನ್ನಡ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. 2021ರಲ್ಲಿ ನಡೆದ ಕೆ.ಜಿ.ಎಫ್ ತಾಲ್ಲೂಕಿನ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕೃತಿಗಳು; ಮೇಲುಕೋಟೆ ಸುತ್ತಿನ ಜನಪದ ಕಥೆಗಳು, ಭೂಮಿ ತೂಕದ ಮಾತು' (ಗಾದೆಗಳು) . ಕೋಲಾರ ಜಿಲ್ಲೆಯ ಆಚರಣೆಗಳು ಮತ್ತು ಸಂಪ್ರದಾಯಗಳು, ಜೇನಹನಿ ಪಂಚತಂತ್ರ ನೀತಿ, ಹಾಸ್ಯದ ಆನಂದ, ಸುವರ್ಣ ಕೆ.ಜಿ.ಎಫ್' ಸ್ಮರಣ ಸಂಚಿಕೆ, ಜಾನಪದ ಸುಗ್ಗಿ, ಕನ್ನಡ ಶಿಶುಪ್ರಾಸಗಳು, ಜಾನಪದ ವಿಹಾರ, ಟಿ.ತಿಮ್ಮಯ್ಯನವರ ಜೀವನ ಚರಿತ್ರೆ, ಕಾವ್ಯಕೃಷಿಕ ಡಾ.ದೊಡ್ಡರಂಗೇಗೌಡರ ಜೀವನ ಚರಿತ್ರೆ'.
ಪ್ರಶಸ್ತಿ-ಪುರಸ್ಕಾರಗಳು: 'ಕೋಲಾರ ಜಿಲ್ಲೆಯ ಆಚರಣೆಗಳು ಮತ್ತು ಸಂಪ್ರದಾಯಗಳು' ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು 2005ರಲ್ಲಿ 'ಅಕ್ಕಮ್ಮ ಗಿರಿಗೌಡ' ಪ್ರಶಸ್ತಿ ನೀಡಿದೆ.