ಕವಯತ್ರಿ ನಾಗಲಕ್ಷ್ಮಿ ಹರಿಹರೇಶ್ವರ ಅವರು 1946 ಮೇ 20 ರಂದು ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ನಾಟಕ ಕರ್ತೃ, ನಿರ್ದೇಶಕಿ ಮತ್ತು ನಟಿ, ಆಕಾಶವಾಣಿ ಕಲಾವಿದೆ, ನಾಟಕಶಾಸ್ತ್ರ ಅಧ್ಯಾಪಕಿ. “ಕಿಶೋರಿ” ಅವರ ಮೊದಲ ಕವನ ಸಂಕಲನ. `ಭಾನುಮತಿ' ಪ್ರಬಂಧಗಳ ಸಂಕಲನವನ್ನು ಹೊರತಂದಿದ್ದಾರೆ. ಲಲಿತ ಪ್ರಬಂಧಗಳಾದ ’ಚಿಂತನೆಯ ಅಲೆಗಳು', ಆಕಾಶವಾಣಿ ಚಿಂತನಾ ಕಾರ್ಯಕ್ರಮದಲ್ಲಿ ಪ್ರಸಾರಿತ.
ಕನ್ನಡದ ಕೆಲಸಕ್ಕಾಗಿ ಅಮೆರಿಕಾದಲ್ಲಿನ ವಿವಿಧ ರಾಜ್ಯಗಳ ಕನ್ನಡ ಸಂಘಗಳಿಂದ ಸನ್ಮಾನ. ಅಮೆರಿಕಾದ ಹಲವಾರು ಕನ್ನಡಪರ ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳು, ಭಾರತದಲ್ಲಿ ಮೈಸೂರಿನ ಹೊಯ್ಸಳ ಕನ್ನಡ ಸಂಘ, ಸರ್ವಜ್ಞ ಕನ್ನಡ ಸಂಘ, ರೋಟರಿ ಸಂಸ್ಥೆ, ಕದಳಿ ಮಹಿಳಾ ವೇದಿಕೆ-ಮುಂತಾದ ಸಾಹಿತ್ಯ ಮತ್ತು ಸಾಮಾಜಿಕ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕೃತರಾಗಿದ್ಧಾರೆ. ದರ್ಶನ ಗ್ರಂಥದ ಸಂಪಾದಕ ಸಲಹಾ ಸಮಿತಿ ಸದಸ್ಯೆಯಾಗಿದ್ದರು. ಕ್ಯಾಲಿಫೋರ್ನಿಯ ಕನ್ನಡಕೂಟ ವಾರ್ಷಿಕ ಸಾಹಿತ್ಯ ಸಂಚಿಕೆ 'ವಿಕ್ರಮ' ಸಂಪಾದಕಿ, ಅಮೆರಿಕೆಯ ತ್ರಿವೇಣಿ ಸಂಗಮ ಮೊದಲಾದ ಕನ್ನಡಕೂಟಗಳ ಉತ್ಸಾಹಿ ಕಾರ್ಯಕರ್ತೆಯೂ ಆಗಿದ್ದರು.