ಲೇಖಕ ಮುರಳೀಧರ ಉಪಾಧ್ಯ ಹಿರಿಯಡಕ ಅವರು ವೃತ್ತಿಯಿಂದ ಪ್ರಾಧ್ಯಾಪಕರು. ‘ಪತಂಚಲ ಕಾವ್ಯ’ ಅವರ ಕಾವ್ಯನಾಮ. 1950 ಮೇ 29ರಂದು ಮೈಸೂರು ಜಿಲ್ಲೆಯ ಕೊಳ್ಳೇಗಾಲದಲ್ಲಿ ಜನಿಸಿದರು. ಎಂ. ಎ. ಕನ್ನಡ ಹಾಗೂ ಹಿಂದಿ ರತ್ನ ಪದವಿ ಗಳಿಸಿದ್ದಾರೆ. ‘ಪೇಜಾವರ ಸದಾಶಿವ ರಾಯರು (1972), ಎಂ. ಎನ್. ಕಾಮತ್ (1975), ಕಯ್ಯಾರ ಕಿಞ್ಞಣ್ಣ ರೈ (1989), ಎಸ್. ಯು. ಪಣಿಯಾಡಿ (1997), ಡಾ. ಬಿ. ಚಂದಯ್ಯ ಹೆಗಡೆ (1997 ), ತುಳು - ಎಸ್. ಯು. ಪಣಿಯಾಡಿ (1996), ಡಾ. ಯು. ಆರ್. ಅನಂತಮೂರ್ತಿ (2002), ಹಾಜಿ ಅಬ್ದುಲ್ಲಾ ಸಾಹೇಬ್ (2006), ಪುಸ್ತಕ ಪ್ರತಿಷ್ಠೆ (2009) - ಅವರ ಕೃತಿಗಳು. ಉದಯವಾಣಿಯಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದಂತೆ ‘ಪುಸ್ತಕ ಪ್ರೀತಿ’ ಎಂಬ ಅಂಕಣವನ್ನು ಬರೆಯುತ್ತಿದ್ದರು.
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತ ಹೊಂದಿದ್ದಾರೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಆಡಳಿತ ಮಂಡಳಿ ಸದಸ್ಯ, ಉಡುಪಿಯ 'ರಥಬೀದಿ ಗೆಳೆಯರು ಸಾಂಸ್ಕೃತಿಕ ಸಂಘಟನೆ’ಯ ಅಧ್ಯಕ್ಷ, ಕರ್ನಾಟಕ ಸರಕಾರದ ಗೆಜೆಟೆಇಯರ್ ಸಲಹಾ ಸಮಿತಿಯ ಸದಸ್ಯ ಮುಂತಾದ ಹುದ್ದೆಗಳನ್ನು ನಿರ್ವಹಿದವರು.
ಗೋವಿಂದ ಪೈ ಸಂಶೋಧನ ಸಂಪುಟ (1995), ದಕ್ಷಿಣ ಕನ್ನಡದ ದೇವಾಲಯಗಳು (2000), ಪೇಜಾವರ ಪ್ರಶಸ್ತಿ (1999), ಹಾಜಿ ಅಬ್ದುಲ್ಲಾ ಸಾಹೇಬರು (2001 - ಎಚ್ ಡುಂಡಿರಾಜರೊಂದಿಗೆ), ದಕ್ಷಿಣ ಕನ್ನಡ ಕಾವ್ಯ 1901 - 1996 (1997 - ಸುಬ್ರಾಯ ಚೊಕ್ಕಾಡಿಯವರೊಂದಿಗೆ), ಯು. ಆರ್. ಅನಂತ ಮೂರ್ತಿ (2000), ಬಿ. ವಿ. ಕಾರಂತ (1996), ವೈದೇಹಿ (ಜೀವನ , ಕೃತಿಗಳ ಸಮೂಹ ಶೋಧ-2018), ಕೊಂಕಣಿ ಭಾಷೆ - ಸಾಹಿತ್ಯ (1995), ವಿಭುದೇಶ ತೀರ್ಥರು (2010), ಉಡುಪಿ ಜಿಲ್ಲಾ ಸಾಂಸ್ಕೃತಿಕ ಸಾತತ್ಯ (2010), ಬನ್ನಂಜೆ ರಾಮಾಚಾರ್ಯರ ಸಂಪಾದಕೀಯ ಸಂಪುಟ (ಭಾಗ - 1 - 2010), ಪಾದೂರು ಗುರುರಾಜ ಭಟ್ (2012) - ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ.
ಅವರ ಈ ಸಾಹಿತ್ಯ ಸೇವೆಗೆ ‘ಇನಾಂದಾರ್ ವಿಮರ್ಶಾ ಪ್ರಶಸ್ತಿ, ಎಂ. ಗೋಪಾಲಕೄಷ್ಣ ಅಡಿಗ ಜನ್ಮ ಶತಾಬ್ಧಿ ಪ್ರಶಸ್ತಿ-2017, ಕಾಂತಾವರ ಕನ್ನಡ ಸಂಘ ಪುರಸ್ಕಾರ -2009, ಶ್ರೀ ರಾಮ ವಿಠಲ ಪ್ರಶಸ್ತಿ -2013, ಶ್ರೀ ಕೄಷ್ಣ ಮುಖ್ಯಪ್ರಾಣ ಪ್ರಶಸ್ತಿ -2002, ಜ್ಞಾನದೇಗುಲ ಪ್ರಶಸ್ತಿ -2017’ ಪ್ರಶಸ್ತಿಗಳು ಸಂದಿವೆ.