ಮೌನೇಶ್ ನವಲಹಳ್ಳಿ ಅವರು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ನವಲಹಳ್ಳಿ ಗ್ರಾಮದವರು. ಕುಷ್ಟಗಿಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ದೂರ ಶಿಕ್ಷಣದಲ್ಲಿ ಡಿಪ್ಲೊಮಾ ಪತ್ರಿಕೋದ್ಯಮ ವ್ಯಾಸಂಗ ಮಾಡಿದ್ದಾರೆ. ಬೆಂಗಳೂರಿನ 'ಅದಮ್ಯ'ರಂಗತಂಡದಲ್ಲಿ ಕೆಲ ಕಾಲ ರಂಗನಟರಾಗಿ ಅಭಿನಯಿಸಿದ್ದಾರೆ.ಸದ್ಯ, ನವಲಹಳ್ಳಿಯಲ್ಲಿ ತಮ್ಮದೇ ಆದ 'ಮೌನಗುರು ವುಡ್ ವರ್ಕ್ಸ'ಎನ್ನುವ ಬಡಗಿತನದ ಕೈಗಾರಿಕೆ ನಡೆಸುತ್ತಿದ್ದಾರೆ. 'ಪ್ರೀತಿಯ ಜಾತ್ರಿ' ಇವರ ಪ್ರಕಟಿತ ಮೊದಲ ಕವನ ಸಂಕಲನ.