ಮೋಹನ ಹಬ್ಬು ಅವರು ಅಂಕೋಲೆಯ ಗೋಖಲೆ ಸೆಂಟಿನರಿ ಕಾಲೇಜ್ ಮತ್ತು ಕಾರವಾರದ ದಿವೇಕರ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಭೌತಶಾಸ್ತ್ರ ಅಧ್ಯಾಪಕ, ಪ್ರಾಚಾರ್ಯರಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರಿಗೆ ಓದು, ಬರಹ ಆಸಕ್ತಿ ಕ್ಷೇತ್ರವಾಗಿದೆ. ಪ್ರಸ್ತುತ್ತ ಪ್ರತಿಷ್ಠಿತ ಡಾ. ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತಿದ್ದಾರೆ.
ಕವನ ಸಂಕಲನ : ತೆಂಕನ ಹಸಿರು ನಿಶಾನೆ , ಕುಸುರಿಯೊಳಗಣ ಕಸರು , ಲಾಘವದ ಕ್ಷಣಗಳು ನಾಗಮುರಿ
ಕಥಾಸಂಕಲನ : ವೈಶಾಖದ ಮಳೆ , ವೃತ್ತದೊಳಗೊಂದು ವೃತ್ತ ೩. ಸತ್ಯದ ಕದಪಿಗೆ ಸುಳ್ಳಿನ ಮಚ್ಚೆ ೪. ಚಯನ (ಆಯ್ದ ಕತೆಗಳು : ಅಚ್ಚಿನಲ್ಲಿ ವಿಮರ್ಶೆ . ಚಿತ್ರಮಾಲೆ, ಅನುಸ್ವರ, ಚುಟುಕು ಪ್ರಪಂಚ ನಾಟಕ : ಕರ್ಣ, ನಾಟಕಪಂಚಕ. ಉತ್ತರಣ ಅನುವಾದ : ಕನ್ನಡದಲ್ಲಿ ಉರ್ದು ಶಾಯರಿ, ಬೆಳಕಿನೆಡೆಗೆ (ಕವನಗಳು-ಕೊಂಕಣಿಯಿಂದ ಕನ್ನಡಕ್ಕೆ) , ಗಾಂಧೀಜಿ ಸಾಮಾಜಿಕ ತತ್ತ್ವದರ್ಶನ, ನಿದಾನನಿಕಾಯ (ಪಾಲಿಯಿಂದ ೪. ಕನ್ನಡಕ್ಕೆ), ಆ ಕರಾಳ ರಾತ್ರಿ( ನಾಟಕ- ಇಂಗ್ಲಿಷ್ ನಿಂದ ಕನ್ನಡಕ್ಕೆ)
ಆತ್ಮಕಥನ : ಮುಸ್ಸಂಜೆಯ ಆಲಾಪ ,ಹತ್ತು ಸಂಪಾದನಾಕೃತಿಗಳು