ಲೇಖಕ ಮೋಹನ ಕುರುಡಗಿ ಅವರು ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ತೋಟಗಂಟಿ (ಜನನ: 1950) ಗ್ರಾಮದವರು. ಗದಗ ಜಿಲ್ಲೆಯ ನರೇಗಲ್ ನಲ್ಲಿ ಪದವಿ ಹಾಗೂ ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು. ವೃತ್ತಿಯಿಂದ ಸಮಾಜ ಕಲ್ಯಾಣ ವಿಸ್ತರಣಾಧಿಕಾರಿ ಗಳಾಗಿದ್ದರು. ಬುಡಕಟ್ಟು ಜನಾಂಗದ ಮೊದಲ ಕವಿ ಎಂದೇ ಗುರುತಿಸಲ್ಪಟ್ಟಿದ್ದಾರೆ. ಬಂಡಾಯ ಪ್ರಜ್ಞೆ ಹಾಗೂ ಸಾಮಾಜಿಕ ಎಚ್ಚರಿಕೆಗಳು ಇವರ ಕಾವ್ಯ ಹಾಗೂ ಬರಹಗಳ ಮೂಲ ಅಂಶಗಳಾಗಿವೆ. ದಾಂಡೇಲಿ, ಯಲ್ಲಾಪುರ, ಹಳಿಯಾಳ ಹಾಗೂ ಜೊಯಿಡಾ ಪ್ರದೇಶಗಳಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಸರವನ್ನುಸೃಷ್ಟಿಸಿ ಉದಯಯೋನ್ಮುಖ ಸಾಹಿತಿಗಳನ್ನು ಪ್ರೋತ್ಸಾಹಿಸಿದ್ದರು.
ಕೃತಿಗಳು: ಮತ್ಸ್ಯಗಂಧಿ ಮತ್ತಿತರ ಪದ್ಯಗಳು, ನಗ್ನಸತ್ಯ, ಅಕ್ಷರ ಕಾವ್ಯ, ಶೋಭನಾ, ಮೃಗತೃಷ್ಟ (ಇವೆಲ್ಲವೂ ಕವನ ಸಂಕಲನಗಳು), ನೆನಪು ಸಂಜೀವಿನಿ (ಸಮಗ್ರ ಬದುಕು-ಬರಹ) , 2004 ರ ಫೆಬ್ರವರಿ 13 ರಂದು ನಿಧನರಾದರು.