ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನವರಾದ ಮಮತಾ ಆರ್. ಅವರ ಮನೆ ಮಾತು ಕೊಂಕಣಿ, ಸಿದ್ದಾಪುರದಲ್ಲಿ ಪದವಿ ಶಿಕ್ಷಣ, ಆಂಗ್ಲಭಾಷೆ ಹಾಗೂ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಸೇವೆಗೆ ಸೇರಿ ಪ್ರಸ್ತುತ ಬೆಂಗಳೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಹಾಗೂ ಸಿನೆಮಾ ಆಸಕ್ತಿಯ ಕ್ಷೇತ್ರಗಳು. ನಾಡಿನ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ವಿಜಯವಾಣಿ, ವಿಜಯ ಕರ್ನಾಟಕ, ಕನ್ನಡ ಪ್ರಭ, ಹೊಸದಿಗಂತ ಆಯೋಜಿಸಿದ ಕಥಾ ಸ್ಪರ್ಧೆಗಳಲ್ಲಿ ಬಹುಮಾನ. “ನಿಷೇಧಿತ ಹಾಡುಗಳು' ಗಝಲ್ ಸಂಕಲನ - ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನಸಹಾಯ ಪಡೆದು ಪ್ರಕಟಗೊಂಡಿದೆ. ಸದ್ಯ ಪತಿ ಡಾ. ವಿನೋದ, ಮಕ್ಕಳಾದ ಪ್ರಾಂಜಲ್, ಪ್ರಾಖ್ಯಾ ಇವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.