ಬರಹಗಾರ ಡಾ. ಮಲ್ಲಿಕಾರ್ಜುನ ಸಂಗಪ್ಪ ಮೇತ್ರಿ ಅವರು 1967 ಜೂನ್ 1ರಂದು ಜನಿಸಿದರು. ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಪಡನೂರ ಇವರ ಹುಟ್ಟೂರು. ಇಂಡಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ‘ಕರ್ನಾಟಕ ಗಾಂಧಿ ಹರ್ಡೇಕರ ಮಂಜಪ್ಪ ಜೀವನ ಮತ್ತು ಕೃತಿಗಳು’ ವಿಷಯ ಮಂಡನೆಗೆ ಇವರಿಗೆ ಪಿ.ಎಚ್.ಡಿ. ಪದವಿ ದೊರೆತಿದೆ.
ಕನ್ನಡಮ್ಮ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಆರಂಭಿಸಿದ ಇವರು ಪ್ರಸ್ತುತ ಇನಾಮದಾರ ಕಲಾ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೃತಿಗಳು: ಕ್ಯಾಂಪಸ್ಸಿನ ಕವಿತೆಗಳು, ಮುದ್ರೆ (ಕವನ ಸಂಕಲನ), ಕರ್ನಾಟಕ ಗಾಂಧಿ (ಸಂಶೋಧನಾ ಕೃತಿ), ಕೆ. ಅಮೀನ ಪೇಂಟರ (ವ್ಯಕ್ತಿ ಚಿತ್ರಣ), ಜಾನಪದ ಆಟಗಳು, ಕಾವ್ಯಸ್ಪಂದನ, ಚಿಂತಾಮಣಿ, ಬೆಳ್ಳಿ ಬೆಳಕು, ಸಂತೃಪ್ತಿ, ಹುಡುಕುದೀಪ ಮುಂತದವು.
ಇವರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ, ಸಂಕ್ರಮಣ ಕಾವ್ಯಸ್ಪರ್ಧೆಯ ಪ್ರಶಸ್ತಿ, ಮಂಗಳ ಸಾಹಿತ್ಯ ವೇದಿಕೆ ಗಂಗಾವತಿಯ ವಿಶೇಷ ಸಾಹಿತ್ಯ ಪ್ರಶಸ್ತಿ, ರಾಧಾಕೃಷ್ಣ ಉತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.