ಮಲ್ಲಿಕಾರ್ಜುನ ಢಂಗಿ ಅವರು ಬಾಗಲಕೋಟೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿಯವರು. ವೃತ್ತಿಯಲ್ಲಿ ಶಿಕ್ಷಕರು. ಉತ್ತರ ಕರ್ನಾಟಕ ಜಾನಪದ ಶೈಲಿಯ ಧ್ವನಿಸುರುಳಿಗಳಿಗೆ ಸಾಹಿತ್ಯ ಬರೆಯುವ ಮೂಲಕ ಪ್ರಸಿದ್ಧರು.
ಕೃತಿಗಳು: ಹೆಸರಿಲ್ಲದ ಹೂವುಗಳು (ಕವನ ಸಂಕಲನ) ಬಣ್ಣದ ನೆರಳುಗಳು. (ಕಾದಂಬರಿ), ನಾನು ಮತ್ತು ನನ್ನ ಹೆಣ (ಕಥಾಸಂಕಲನ.)