ಲೇಖಕ ಮಲ್ಲಪ್ಪ ಫ ಕರೇಣ್ಣನವರ ಮೂಲತಃ ರಾಣೇಬೆನ್ನೂರ ತಾಲೂಕಿನ ಹನುಮಾಪರ ಗ್ರಾಮದವರು. ಪ್ರಾಥಮಿಕ ಶಿಕ್ಷಣ ಹನುಮಾಪುರದ ಸರಕಾರಿ ಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣ ರಾಣೆಬೆನ್ನೂರಿನಲ್ಲಿ ಪೂರ್ಣಗೊಳಿಸಿದ್ದಾರೆ. ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಬ್ಯಾಡಗಿ ತಾಲ್ಲೂಕಿನ ದುಮ್ಮಿಹಾಳದಲ್ಲಿ ಸೇವೆ ಸಲ್ಲಿಸಿ, 2004ರಲ್ಲಿ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕರ್ತವ್ಯದಲ್ಲಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಾಮೀಣ ಘಟಕ ಅಧ್ಯಕ್ತ ಮತ್ತು ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿಯಾಗಿದ್ದಾರೆ. ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೂ ಭಾಜನರಾಗಿದ್ದಾರೆ.