About the Author

ಹಿರಿಯ ಪತ್ರಕರ್ತೆ, ಬರಹಗಾರ್ತಿ ಮತ್ತು ಆಪ್ತ ಸಮಾಲೋಚಕಿ. ಪತ್ರಿಕೋದ್ಯಮದಲ್ಲಿ 26 ವರ್ಷಗಳ ವ್ಯಾಪಕ ಅನುಭವ. `ಕನ್ನಡ ಪ್ರಭ'ದಿಂದ ವೃತ್ತಿಜೀವನ ಆರಂಭಿಸಿ ಅಲ್ಲಿ ನಾಲ್ಕು ವರ್ಷಗಳ ಕಾಲ ವರದಿಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಆನಂತರ ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 18 ವರ್ಷಗಳ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಪ್ರಜಾವಾಣಿಯ ಸುದ್ದಿಸಂಪಾದಕಿಯಾಗಿ ಕಾರ್ಯನಿರ್ವಹಿಸಿ 2018ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಪ್ರಸ್ತುತ `ಪ್ರಾಫಿಟ್ ಪ್ಲಸ್' ಪತ್ರಿಕೆಯ ಸಂಪಾದಕೀಯ ಸಲಹೆಗಾರರು. ಸಮಾಜಸೇವೆ, ಮಾನವೀಯ ಕಾರ್ಯಗಳ ಬಗ್ಗೆಯೂ ಆಸಕ್ತಿ ಹೊಂದಿರುವ ಇವರು ಆಪ್ತ ಸಮಾಲೋಚಕಿಯೂ ಹೌದು. ಮನಃಶಾಸ್ತ್ರದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದು, ಕೌನ್ಸೆಲಿಂಗ್‌ನಲ್ಲಿ ಉನ್ನತ ತರಬೇತಿ ಪಡೆಯುವ ಹಾದಿಯಲ್ಲಿದ್ದಾರೆ.

ಸಾಹಿತ್ಯ, ಸದಭಿರುಚಿಯ ಸಿನಿಮಾ ಮತ್ತು ಪ್ರವಾಸ ಇವರ ಇತರ ಆಸಕ್ತಿಗಳು. ಪ್ರಜಾವಾಣಿಯಲ್ಲಿ ಪತ್ರಕರ್ತೆಯಾಗಿದ್ದಾಗ ಹಲವು ಸಾಮಾಜಿಕ ಅನಿಷ್ಟಗಳು, ಪ್ರಚಲಿತ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿದ್ಯಮಾನಗಳ ಕುರಿತು ಹಲವು ಲೇಖನಗಳನ್ನು ಬರೆದಿದ್ದಾರೆ. ಅಭಿವೃದ್ಧಿ ಪತ್ರಿಕೋದ್ಯಮದಲ್ಲಿಯೂ ಆಸಕ್ತಿ ಹೊಂದಿದ್ದು, 2009ನೇ ಸಾಲಿನ `ಚರಕ' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅನುವಾದ, ಸರ್ಕಾರೇತರ ಸಂಸ್ಥೆಗಳ ಸಮಾಜಿಕ ಕಾರ್ಯಗಳ ದಾಖಲೀಕರಣದ ಕೆಲಸವನ್ನೂ ಮಾಡುತ್ತಿದ್ದಾರೆ. ಉತ್ತಮ ಸಂಘಟಕಿಯೂ ಆಗಿದ್ದು, ಕರ್ನಾಟಕ ಪತ್ರಕರ್ತೆಯರ ಸಂಘದ ಸಂಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಾಫಿಟ್ ಪ್ಲಸ್‌ನ `ಜಾಜಿ ಮಲ್ಲಿಗೆ' ಅಂಕಣದಲ್ಲಿ ಇತರರಿಗೂ ಮಾದರಿಯಾಗುವ ಅನನ್ಯ ಮಹಿಳೆಯರ ಕುರಿತು ಬರೆದ ಲೇಖನಗಳ ಗುಚ್ಛ `ದೀಪದ ಮಲ್ಲಿಯರು'.

ಮಾಲತಿ ಭಟ್

BY THE AUTHOR