ಕಲಾವಿದ, ಲೇಖಕ ಮಹಾದೇವ ಎಮ್. ಜಗತಾಪ ಅವರು 1957ರಲ್ಲಿ ಜನಿಸಿದರು. ಗುಳೇದಗುಡ್ಡದ ವೆಂಕಟೇಶ್ವರ ಹಿಂದಿ ಹೈಸ್ಕೂಲಿನಲ್ಲಿ ಚಿತ್ರಕಲಾ ಶಿಕ್ಷಕರಾಗಿ, ಚಿತ್ರಕಲಾವಿದರಾಗಿ ಸೇವೆಸಲ್ಲಿಸಿರುವ ಅವರು ಕಲಾ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಸಾಹಿತಿಯಾಗಿ ಅನೇಕ ಲೇಖನ ಮತ್ತು ಕವನಗಳನ್ನು ಬರೆದುದ್ದಲ್ಲದೆ ಅನೇಕ ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಅನೇಕ ಕಲಾ ಪ್ರದರ್ಶನಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದು, ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಬೇಸಿಗೆಯಲ್ಲಿ ಕಲಾಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಕಲಾಸೇವೆಯಲ್ಲಿ ತೊಡಗಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿಗಾಗಿ ಕಸೂತಿ ಚಿತ್ರಕಲೆಯ ಕುರಿತು ಕ್ಷೇತ್ರ ಕಾರ್ಯ ಮಾಡಿ ಕಸೂತಿ ಚಿತ್ರಕಲೆ ಎಂಬ ಕೃತಿಯನ್ನು ರಚಿಸಿದ್ದಾರೆ.