About the Author

ಮೂಲತಃ ಚಿತ್ರದುರ್ಗ ಜಿಲ್ಲೆಯವರಾದ ಮಧುರಾಣಿ ತಮ್ಮ ಹೆಚ್ಚಿನ ವಿದ್ಯಾಭ್ಯಾಸವನ್ನು ಬೆಂಗಳೂರು ಹಾಗೂ ಮೈಸೂರಿನಲ್ಲಿ ಮುಗಿಸಿ ಮೈಸೂರು ವಿಶ್ವವಿದ್ಯಾಲಯದ ಎಂ ಎ (ಇಂಗ್ಲಿಷ್) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸ್ನಾತಕೋತ್ತರದಲ್ಲಿ ರಾಜ್ಯ ಮಟ್ಟದ ಮೂರನೇ ರ್‍ಯಾಂಕ್ ಪಡೆದ ಹಿರಿಮೆ ಇವರದ್ದು. ಸುಮಾರು 18 ವರ್ಷಗಳ ಬೋಧನಾ ಅನುಭವ. ಹಲವು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಮತ್ತು ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ, ಪ್ರಸ್ತುತ ಮೈಸೂರಿನ ಸರ್ಕಾರಿ ವಿದ್ಯಾಸಂಸ್ಥೆಯಲ್ಲಿ ಅಧ್ಯಾಪಕರು.

ತಮ್ಮ ಹತ್ತನೇ ತರಗತಿಯಲ್ಲಿಯೇ ಚಿತ್ರದುರ್ಗದ ಸ್ಥಳೀಯ ಸಾಪ್ತಾಹಿಕವೊಂದರಲ್ಲಿ ಅಂಕಣ ಬರೆಯುತ್ತಿದ್ದ ಮಧು, ನಂತರ ವೈಯಕ್ತಿಕ ಕಾರಣಗಳಿಂದಾಗಿ ಹಲವು ವರ್ಷಗಳು ತಮ್ಮ ಆಸಕ್ತಿಯ ಕ್ಷೇತ್ರವಾದ ಬರವಣಿಗೆಯಿಂದ ದೂರವಿದ್ದು, 2016ರಲ್ಲಿ ಮೊದಲ ಕವನ ಸಂಕಲನ 'ನವಿಲುಗರಿಯ ಬೇಲಿ' ಪ್ರಕಟಿಸಿದರು. ಇದು ಕನ್ನಡ ಪುಸ್ತಕ ಪ್ರಾಧಿಕಾರವು ಕೊಡಮಾಡುವ ಯುವ ಸಾಹಿತಿಗಳ ಚೊಚ್ಚಲ ಕೃತಿಯ ಧನಸಹಾಯದ ಪುರಸ್ಕಾರ ಪಡೆದು ಪ್ರಕಟಗೊಂಡಿದೆ. "ನೀಲಿ ಚುಕ್ಕಿಯ ನೆರಳು' ಇವರ ಎರಡನೆಯ ಕವನ ಸಂಕಲನ. ಇದು ಈ ಹೊತ್ತಿಗೆ'ಯ ಮೊಟ್ಟಮೊದಲ ಕಾವ್ಯ ಪ್ರಶಸ್ತಿ ಪಡೆದುಕೊಂಡಿದೆ.

ಕೃತಿಗಳು: 'ನವಿಲುಗರಿಯ ಬೇಲಿ', ‘ನೀಲಿ ಚುಕ್ಕಿಯ ನೆರಳು'

ಮಧುರಾಣಿ ಎಚ್ ಎಸ್

(09 Dec 1984)

BY THE AUTHOR