ಚಲನಚಿತ್ರ ನಟ, ಸಂಗೀತ ನಿರ್ದೇಶಕ, ನಿರ್ಮಾಪಕ ಹಾಗೂ ನಿರ್ದೇಶಕ ಮದನ್ ಪಟೇಲ್. "ತಮಟೆ" ಪ್ರಥಮ ಕಾದಂಬರಿ. ದ್ವಿತೀಯ ಕಾದಂಬರಿ "ಮಹಾಮಾಯೆ". ಅಮೆರಿಕದ ಅಕ್ಕ ಕಥರಿನ ಕನ್ನಡಕೂಟ ಬಹರೈನ್ ಕನ್ನಡ ಸಂಘ ಸಿಂಗಪುರ ಕನ್ನಡ ಸಂಘ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನ ದಲ್ಲಿ ಭಾಗವಹಿಸಿದ್ದರು. ಆಂಧ್ರ ಹೆಂಡ್ತಿ, ಮಹಾ ಚತುರ, ಪೊಲೀಸ್ ಆಫೀಸರ್, ಓಕೆ ಸರ್ ಓಕೆ, ಹೀಗೂ ಉಂಟೆ, ಸತ್ಯಾನಂದ, ತಮಟೆ ಮುಂತಾದ ಹಲವಾರು ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ. ಇಂಡಿಯನ್ ಮಹಾ ಚತುರ ಲವ್ ಸ್ಟೋರಿ ನಿನದೇ ನೆನಪು ಮುಂತಾದ 14 ಕನ್ನಡ ಚಲನಚಿತ್ರಗಳನ್ನು, ಭಲೇ ಅಮ್ಮಾಯಿಲು, ಸ್ವಾಮಿ ಸತ್ಯಾನಂದ ಉಗ್ರ ನರಸಿಂಹ ಮುಂತಾದ ತೆಲುಗು ಚಲನಚಿತ್ರಗಳು ಹಾಗೂ ಉಯಿರ್ ಉಳ್ಳವರೈ, ಸ್ವರ್ಗಂ ಎನ್ ಕೈಯಿಲ್ ತಮಿಳು ಚಲನಚಿತ್ರಗಳನ್ನು ನಿರ್ಮಾಣ ಮಾಡಿರುತ್ತಾರೆ. ಮಹಾಚತುರ, ಹೀಗೂ ಉಂಟೆ, ನಿನದೆ ನೆನಪು, ಸತ್ಯಾನಂದ(ಯಾರಿವನು) ಮುಂತಾದ ಹಲವಾರು ಚಿತ್ರ ನಿರ್ದೇಶಿಸಿದ್ದಾರೆ. 7400ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ದೇಶ ವಿದೇಶಗಳಲ್ಲಿ ನೀಡಿರುತ್ತಾರೆ. 1998 ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.