ಎಂ. ರಾಘವೇಂದ್ರ ಪ್ರಭು ಅವರು ಮೂಲತಃ ಮಂಗಳೂರಿನವರು. ಬನಾರಸ್ ವಿಶ್ವವಿದ್ಯಾಲಯದಲ್ಲಿ ಪ್ರಾಚೀನ ಭಾರತೀಯ ಸಂಸ್ಕೃತಿ ಮತ್ತು ಪುರಾತತ್ವ ಶಾಸ್ತ್ರ ಎಂ.ಎ ಯಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದು ತೇರ್ಗಡೆಯಾಗಿರುತ್ತಾರೆ. ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಮೂವತ್ತು ವರ್ಷಗಳ ಕಾಲ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿರುತ್ತಾರೆ.
ಕೃತಿಗಳು: ಅಸಂಗ, ನಾಯಿಯ ಅಂತ್ಯ ಸಂಸ್ಕಾರ, ನಿತ್ಯಾವತಾರಗಳು(ಕಥಾ ಸಂಕಲನ), ಕೈವಲ್ಯ-ವೇದೋಪನಿಷತ್ತುಗಳು, ಭಾರತೀಯ ದರ್ಶನಗಳ ಸರಳ ನಿರೂಪಣೆ(ಆಧ್ಯಾತ್ಮಿಕ ಕೃತಿಗಳು), ಬಹುತ್ವ ಭಾರತ ಕಟ್ಟಿದವರು(ಇತಿಹಾಸ)