ನಿಸರ್ಗತನಯ ಕಾವ್ಯನಾಮಾಂಕಿತ ಕವಿ, ಬರಹಗಾರ ಎಂ.ಆರ್. ದೇವರಾಜ್ ಅವರು ಜನಿಸಿದ್ದು 1976 ಜುಲೈ 10ರಂದು. ತಂದೆ ರಾಮಪ್ಪ. ತಾಯಿ ಮೆಣಸಮ್ಮ. ವೃತ್ತಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರಾಗಿರುವ ದೇವರಾಜ್ ಅವರು ಪ್ರವೃತ್ತಿಯಲ್ಲಿ ಬರಹಗಾರರು. ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಪ್ರಸ್ತುತ ಬಂಗಾರಪೇಟೆ ತಾಲ್ಲೂಕು ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪಯಣ (ಕವನ ಸಂಕಲನ) ಹಾಗೂ ಚುಟುಕಾಮೃತ (ಚುಟುಕುಗಳ ಸಂಕಲನ) ಇವರ ಕೃತಿಗಳಾಗಿವೆ. ಕಣ್ಣಂಚಿನ ಬೆಳಕು ಹಾಗೂ ನನ್ನ ಕಥೆಗಳು ಕೃತಿಗಳು ಬಿಡುಗಡೆಯಾಗಲಿವೆ. ಧಾರವಾಡದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.