About the Author

‌ಎಂ. ನಾರಾಯಣ ಸ್ವಾಮಿ ಅವರು ಮೂಲತಃ ಕೋಲಾರ ಜಿಲ್ಲೆಯ ತ್ಯಾವನಹಳ್ಳಿಯವರು. ಅವರು 1963 ಏಪ್ರಿಲ್‌ 12ರಂದು ಜನನ. ಬೆಂಗಳೂರಿನ ಹೆಬ್ಬಾಳದ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪಶು ಶರೀರಕ್ರಿಯಾ ವಿಜ್ಞಾನ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿ ಕಾರ್ಯನಿರ್ವಹಣೆ. 

ತಮ್ಮ ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಿದ ಅವರು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ವಿದ್ಯಾರ್ಥಿ ದೆಸೆಯಿಂದಲೂ ವೈಚಾರಿಕ ಲೇಖನಗಳ ಬರವಣಿಗೆಯಲ್ಲಿ ಆಸಕ್ತಿ ತಳೆದಿದ್ದ ಅವರು ನಂತರ ಸಾಹಿತ್ಯ ಕ್ಷೇತ್ರದಲ್ಲಿಯೇ ವೃತ್ತಿ ಮತ್ತು ಪ್ರವೃತ್ತಿಯನ್ನು ಆಯ್ದುಕೊಂಡಿದ್ದಾರೆ. 

ಜಾನುವಾರುಗಳು, ತೆನೆಮರೆಯ ಕ್ರಾಂತಿ:ರಾಗಿ ಲಕ್ಷ್ಮಣಯ್ಯ, ಪಶುವೈದ್ಯ ಸಂಪದ, ನಿಮಗೆ ನೀವೇ ಬೆಳಕಾಗಿ, ಮಹಾನದಿಯ ಉಗಮ, ಜ್ಞಾನ-ವಿಜ್ಞಾನ - ವಿಜ್ಞಾನಕ್ಕೆ ಸಂಬಂದಿಸಿದ ಅವರ ಪ್ರಮುಖ ಕೃತಿಗಳು.

ಎಂ. ನಾರಾಯಣ ಸ್ವಾಮಿ