ಎಂ ಡಿ ಪಲ್ಲವಿ ಖ್ಯಾತ ಗಾಯಕಿ, ಕಲಾವಿದೆ, ಸಂಗೀತ ನಿರ್ದೇಶಕಿ. ಅವರು ಬನಾರಸ್ ವಿಶ್ವವಿದ್ಯಾಲಯದಿಂದ ಹಿಂದೂಸ್ತಾನಿ ಸಂಗೀತದಲ್ಲಿ ಪದವಿ ಪಡೆದಿರುವ ಅವರು ಹಲವು ದಿಗ್ಗಜರ ಗರಡಿಯಲ್ಲಿ ಹಿಂದೂಸ್ತಾನಿ ಹಾಗೂ ಸುಗಮ ಸಂಗೀತದ ತರಬೇತಿ ಪಡೆದಿದ್ದಾರೆ. ರಂಗಭೂಮಿ ಹಾಗೂ ಸಿನೆಮಾ ಇವರು ಹೆಜ್ಜೆಗುರುತು ಮೂಡಿಸಿರುವ ಎರಡು ಪ್ರಮುಖ ಕ್ಷೇತ್ರಗಳು. ಭಾವಸಂಗೀತಕ್ಕಾಗಿ ಇವರಿಗೆ ಉಸ್ತಾದ್ ಬಿಸ್ಮಿಲ್ಲಾಖಾನ್ ಯುವಪುರಸ್ಕಾರ ದೊರೆತಿದೆ. ಅವರು ರಂಗಭೂಮಿ, ಸಿನೆಮಾ, ಸಂಗೀತ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ಸೀರೆ ಉಡುವ ರಾಕ್ ಸ್ಟಾರ್’ ಅವರ ಮೊದಲ ಅನುವಾದಿತ ಕೃತಿಯಾಗಿದೆ.