ಕತೆಗಾರ್ತಿ ಲೀಲಾ ದಾಮೋದರ್ ಅವರು 1954ರಲ್ಲಿ ಕೊಡಗು ಜಿಲ್ಲೆಯ ಚೆಂಬು ಗ್ರಾಮದಲ್ಲಿ ಜನಿಸಿದರು. ಉಪನ್ಯಾಸಕಿಯಾಗಿ ನಿವೃತ್ತಿ ಪಡೆದಿದ್ದಾರೆ. ಹೆಗ್ಗಡೆಯ ಮಗಳು ಅವರ ಕಥಾಸಂಕಲನ. ‘ಮಾತು ಬೇಡದ ಕ್ಷಣಗಳು’ ಕವನ ಸಂಕಲನ, ‘ಕಂದನ ಕನಸು’ ಶಿಶು ಕಾವ್ಯ ಪ್ರಕಟವಾಗಿವೆ. ಅವರಿಗೆ ‘ತುಷಾರ ಎಚ್. ಎಂ. ಟಿ. ಕಥಾ ಪ್ರಶಸ್ತಿ’ ಲಭಿಸಿವೆ.