ಲಲಿತಾಂಬ ಬಿ.ವೈ ಎಂ.ಎ ಹಿಂದಿ ಪದವೀಧರೆ.ಮೈಸೂರಿನವರು. ತಂದೆ ಭಾಸ್ಕರಂ ಯಜೇಶ್ವರ ಸೋಮಯಾಜಿ, ತಾಯಿ ಗೌರಮ್ಮ. ‘ತೀರ್ಥಂಕರ (ಮಕ್ಕಳ ಪುಸ್ತಕ), ಅಸ್ತಿತ್ವವಾದ, ನವನಿರ್ಮಾಣದೆಡೆಗೆ (ಅನುವಾದ).
‘ರಾಧಾಕೃಷ್ಣ ಭಕ್ತಿಕೋಶ, ವಚನೋದ್ಯಾನ, ಶತದಳ, ಭಾರತೀಯ ಉಪನ್ಯಾಸ ಕಥಾಸಾರ, ಭಾರತೀಯ ಕಹಾನಿಯಾ, ಶ್ರೇಷ್ಠ ಲಲಿತ ನಿಬಂದ್, ಶ್ರೇಷ್ಠ ಬಾಲ ಕಹಾನಿಯಾ’ ಇತ್ಯಾದಿ ಕೃತಿಗಳನ್ನು ಕನ್ನಡದಿಂದ ಹಿಂದಿಗೆ ಅನುವಾದಿಸಿದ್ದಾರೆ.
1982ರಲ್ಲಿ ಕರ್ನಾಟಕ ಸರಕಾರದ ಪ್ರಶಸ್ತಿ, 1988ರಂದು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಮಂತ್ರಾಲಯದ ಸಾಹಿತ್ಯ ಸೌಹಾರ್ದ ಸನ್ಮಾನ, 1996ರಲ್ಲಿ ಸಾಹಿತ್ಯ ಸಾಧನಾ ಸನ್ಮಾನ ಹಾಗೂ ಪಶ್ಚಿಮ ಬಂಗಾಳ ಒಟ್ಟು 14 ರಾಷ್ಟ್ರೀಯ ಸನ್ಮಾನಗಳಿಗೆ ಭಾಜನರಾಗಿದ್ದಾರೆ.