ಲಕ್ಷ್ಮೀ ಶ್ರೀನಿವಾಸ್ ಅವರು ಮೂಲತಃ ಬೆಂಗಳೂರಿನವರು. 1961 ಜುಲೈ 22 ರಂದು ಜನನ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿರುತ್ತದೆ. ವಾಚಕರ ವಾಣಿಯಲ್ಲಿ ಬರಹಗಳು ಪ್ರಕಟಗೊಂಡಿರುತ್ತದೆ. ಸಿನಿಮಾ ಬಗ್ಗೆ ವಿಮರ್ಶೆ, ಹವ್ಯಾಸಿರಂಗಭೂಮಿಯಲ್ಲಿ ತೊಡಗಿಕೊಂಡಿದ್ದಾರೆ. ಅನೇಕ ಕನ್ನಡ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಗೋಕಾಕ್ ವರದಿ ಹೋರಾಟದಲ್ಲಿ ಭಾಗಿ, ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಹೋರಾಟದಲ್ಲಿ ಭಾಗಿ, ಕಾವೇರಿ ಚಳುವಳಿ, ಹೊಗೇನಕಲ್ ಚಳುವಳಿ, ದೂರದರ್ಶನದಲ್ಲಿ ರಾಮಾಯಣ ಧಾರಾವಾಹಿಯನ್ನು ಕನ್ನಡದಲ್ಲಿ ಪ್ರಸಾರ ಮಾಡಲು ವಿರೋಧಿಸಿದರು. ಕನ್ನಡಿಗರಿಗೆ ಮೂರು ಮತ್ತು ನಾಲ್ಕನೇ ದರ್ಜೇ ಹುದ್ದೆ ಕನ್ನಡ ಕಡ್ಡಾಯವಲ್ಲ ವಿರೋಧಿ ಹೋರಾಟ, ಕನ್ನಡ ಪರವಾದ ಯಾವುದೇ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಅವರ ಹವ್ಯಾಸ.