ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕೆ.ಶೈಲಾಕುಮಾರಿ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮೂಲತಃ ಕೇರಳದ ಕಾಸರಗೋಡು ತಾಲ್ಲೂಕಿನ ಕುಳವರ್ಮದವರಾದ ಇವರು ಮಂಗಳೂರಿನಲ್ಲಿ ’ಭೂಮಿಗೀತ’ ಎಂಬ ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮುದ್ದುಗಿಣಿಯ ಸಾಕಿ (ಕಥಾ ಸಂಕಲನ), ಹೊಳೆಯ ನೀರು(ಕಾವ್ಯ) ಇವರ ಪ್ರಮುಖ ಕೃತಿಗಳು. ಇವರಿಗೆ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯಲ್ಲಿ ನಾಲ್ಕು ಬಾರಿ ಬಹುಮಾನ ಲಭಿಸಿದೆ. ಇವರು ಉಷಾ ಕಿರಣ ಪತ್ರಿಕೆಯಲ್ಲಿ ಕಣ್ಣಾಮುಚ್ಚೆ ಎಂಬ ಅಂಕಣವನ್ನು ಬರೆಯುತ್ತಿದ್ದರು.