ಪ್ರೊ. ಕೆ.ಎಸ್. ಕಣ್ಣನ್ ಅವರು ಮೂಲತಃ ಬೆಂಗಳೂರಿನವರು. ಚೆನ್ನೈನ ಸಂತ ರಾಜೇಂದ್ರ ಸಿಂಗ್ ಜೀ ಮಹಾರಾಜ್ ಸ್ಥಾಪಿಸಿದ ಐಐಟಿ ಸಂಸ್ಥೆಯ ಮಾನವೀಯ ವಿಭಾಗದ ಮುಖ್ಯಸ್ಥರಾಗಿದ್ದರು. ಇದಕ್ಕೂ ಮೊದಲು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನಿರ್ದೇಶಕರು ಹಾಗೂ ಸಂಸ್ಕೃತ ವಿಶ್ವವಿದ್ಯಾಲಯದ (ಸಂಜೆ) ಪ್ರಾಂಶುಪಾಲರಾಗಿದ್ದರು. 35 ವರ್ಷ ಕಾಲ ಸಂಸ್ಕೃತವನ್ನು ಬೋಧಿಸಿದ ಅವರು ಈವರೆಗೆ ಸಂಸ್ಕೃತ ಭಾಷೆ, ವ್ಯಾಕರಣ ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿ 25ಕ್ಕೂ ಆಧಿಕ ಕೃತಿಗಳನ್ನು ರಚಿಸಿದ್ದಾರೆ. ರಾಜೀವ್ ಮಲ್ಹೋತ್ರ ಅವರು ಬರೆದ `ವಿಭಿನ್ನತೆ: ಪಾಶ್ಚಾತ್ಯ ಸಾರ್ವತ್ರಿಕವಾದಕ್ಕೆ ಭಾರತೀಯ ಸವಾಲು’ ಎಂಬ ಕೃತಿಯನ್ನು ಎಚ್.ಆರ್. ಮೀರಾ ಅವರೊಂದಿಗೆ ಸೇರಿ ಕೆ.ಎಸ್. ಕಣ್ಣನ್ ಅವರು ಕನ್ನಡೀಕರಿಸಿದ್ದಾರೆ.