ಸಾಹಿತಿ ಕೆ.ಬಸಪ್ಪ ಬಳ್ಳಾರಿ ಜಿಲ್ಲೆಯ ಕೌಲ್‍ಬಜಾರ್‌ನ ಬಂಡಿಹಟ್ಟಿ ಗ್ರಾಮದಲ್ಲಿ 1970 ಜುಲೈ 28 ರಂದು ಜನಿಸಿದರು. ತಂದೆ ಸಿದ್ದಪ್ಪ ತಾಯಿ ದೇವಮ್ಮ. ಬಯಲಾಟ, ಜನಪದ ಕಲೆ, ಗೀತೆ, ಪತ್ರಿಕೋದ್ಯಮ, ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಆಸಕ್ತಿ. ಎಂ.ಎ. ಪದವೀಧರರು.
1998 ರಿಂದ 2001ರವರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಡಾ.ಸ.ಚಿ.ರಮೇಶ್ ಅವರ ಮಾರ್ಗದರ್ಶನದಲ್ಲಿ “ಬಳ್ಳಾರಿಯ ಕೌಲ್‍ಬಜಾರ್‌ನ ಸಾಂಸ್ಕೃತಿಕ ಅಧ್ಯಯನ” ಎಂಬ ವಿಷಯದ ಮೇಲೆ ಮಹಾಪ್ರಬಂಧ ಮಂಡಿಸಿ ಪಿಹೆಚ್.ಡಿ ಪದವಿ ಪಡೆದರು. ’ಮೂರು ಹಿಂಡಿನವರು’ ಜನಪದ ಡೊಳ್ಳಿನ ಹಾಡುಗಳ ಕೃತಿ ಬರೆದಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ 2017ರಲ್ಲಿ ಪ್ರಕಟವಾಗಿದೆ.
ನಾಡಿನ ವಿವಿಧ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ. ಸಂಜೆವಾಣಿ ದೈನಂದಿನ ಪತ್ರಿಕೆಯಲ್ಲಿ 12 ವರ್ಷ ಉಪಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಬಳ್ಳಾರಿಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.