ಲೇಖಕ-ಕಲಾವಿದ ಕೆ. ಅನಂತರಾಮ ರಾವ್ ಭಾರತೀಯ ಜೀವವಿಮಾ ನಿಗಮದಲ್ಲಿ ಹಿರಿಯ ಪ್ರಬಂಧಕರಾಗಿ ನಿವೃತ್ತರು. ನಾಟಕ ಹಾಗೂ ಯಕ್ಷಗಾನ ರಂಗದಲ್ಲಿ ಹೆಚ್ಚಿನ ಆಸಕ್ತಿ. ಉತ್ತಮ ವಾಗ್ಮಿಗಳು. ಆಕಾಶವಾಣಿಯಲ್ಲಿ ಇವರ ಚಿಂತನೆಗಳು ಪ್ರಸಾರವಾಗಿವೆ. 1970 ರಲ್ಲಿ, ಯಕ್ಷಗಾನವನ್ನು ಪ್ರಪ್ರಥಮವಾಗಿ ಆಂಗ್ಲಭಾಷೆಯಲ್ಲಿ ಪ್ರದರ್ಶನ ಮಾಡಿದ ಕೀರ್ತಿ ಇವರದು..
ಕೃತಿಗಳು: ಅನಂತ ರಾಮಾಯಣ, ಯಕ್ಷಪ್ರಶ್ನೆ, ಸ್ವಾತಂತ್ರ ಸ್ವರ್ಣ ರೇಖೆ, ದಕ್ಷಿಣ ಕನ್ನಡ, ಸಂಪೂರ್ಣ ಭಾಗವತ, ಸಂಪೂರ್ಣ ಮಹಾಭಾರತ .ಅನೇಕ ಶಿಕ್ಷಣ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ, ಸಂಸ್ಥೆಗಳಲ್ಲಿ ಗೌರವ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಶಸ್ತಿ-ಪುರಸ್ಕಾರಗಳು: 1991 ರಲ್ಲಿ, ಬೆಂಗಳೂರಿನ ಶ್ರೀ ವಿದ್ಯಾಪೀಠ ಸಂಸ್ಥೆಯು ’ ಸಮಾಜಭೂಷಣ’ ಎಂಬ ಬಿರುದು ನೀಡಿದೆ. ಅವರ ಕ್ರೀಡಾ ಸೇವೆ ಗುರುತಿಸಿ ಮಂಗಳೂರಿನಲ್ಲಿ ಬಂಗಾರದ ಪದಕ ನೀಡಿ ಗೌರವಿಸಿದ್ದಾರೆ. ಪ್ರಸನ್ನದಾಯಿ, ಪ್ರವಚನ ಪಟು ಹೀಗೆ ಅನೇಕ ಪ್ರಶಸ್ತಿಗಳು ಲಭಿಸಿವೆ.