ಲೇಖಕಿ ಜ್ಯೋತಿ ಚೇಳ್ಯಾರು ಕನ್ನಡ ತುಳು ಎರಡೂ ಭಾಷೆಗಳಲ್ಲಿ ಬರೆಯುವ ಕವಯತ್ರಿ ಮತ್ತು ವಿಮರ್ಶಕಿ, ಜ್ಯೋತಿ ಚೇಳ್ಯಾರು ಅವರು ಕನ್ನಡ ಉಪನ್ಯಾಸಕರಾಗಿದ್ದರು; ಪ್ರಸ್ತುತ ಉಡುಪಿ ಜಿಲ್ಲೆಯ ಪದವಿಪೂರ್ವ ಕಾಲೇಜೊಂದರಲ್ಲಿ ಪ್ರಾಂಶುಪಾಲರಾಗಿದ್ದಾರೆ. 'ಭಾವನಾ' (ಕನ್ನಡ ಕವನ ಸಂಕಲನ), 'ಗೆಜ್ಜೆ' (ತುಳು ಕವನ ಸಂಕಲನ), 'ಕೃಷಿ ಸಂಸ್ಕೃತಿಯಲ್ಲಿ ಕರಾವಳಿಯ ಮಹಿಳೆ' (ಸಂಶೋಧನಾ ಕೃತಿ ಕ.ಸಾ.ಪ. ದತ್ತಿನಿಧಿ ಪ್ರಶಸ್ತಿ ಪಡೆದಿದೆ), ಪನ್ನತಿಕೆ (ಪ್ರಜಾವಾಣಿಯ ಅಂಕಣ ಬರಹ), 'ಕೆಸರು ತುಳಿದು ಹಸಿರು ಬೆಳೆದ ಗುಲಾಬಿಯಕ್ಕ' (ಸಂಶೋಧನೆ) ಇವರ ಪ್ರಕಟಿತ ಕೃತಿಗಳು. 'ಗಂಗಾರತ್ನ ಪ್ರಶಸ್ತಿ ವಿಜೇತರಾಗಿರುವ ಜ್ಯೋತಿ ಚೇಳ್ಯಾರು ತುಳು ಸಾಹಿತ್ಯ ಅಕಾಡೆಮಿಯ ಸಂಶೋಧನಾ ಫೆಲೋಶಿಪ್ ಪಡೆದಿದ್ದಾರೆ.