ಲೇಖಕಿ, ಅಂಕಣಗಾರ್ತಿ, ಪತ್ರಕರ್ತೆ ಜ್ಯೋತಿ ಎಸ್(ಶಾಂತರಾಜು) ಅವರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಗ್ರಾಮದವರು. ಶಾಂತರಾಜು ಮತ್ತು ಗಂಗಮ್ಮ ದಂಪತಿಯ ಮಗಳು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಕುಂಭ ಕಲೆ ಕಲಾವಿದೆ, ವಾಯ್ಸ್ ಓವರ್,INDIA BOOK OF RECORD, KABR HOLDER, TRAVELLER, Photography ಹೀಗೆ ನಾನಾ ವಿಧಗಳಲ್ಲಿ ತನ್ನ ಛಾಪು ಮೂಡಿಸಿದ್ದಾರೆ. ಡಿಪ್ಲೋಮಾ ಇನ್ ಕೌನ್ಸೆಲಿಂಗ್, ನರ್ಸರಿ ಟೀಚರ್ಸ್ ಟ್ರೈನಿಂಗ್, ಬುಕ್ ಬ್ರಹ್ಮದಲ್ಲಿ ಆರ್ಟಿಕಲ್ಸ್ ರೈಟರ್ ಮತ್ತು ಟಿವಿ-9 ನ ಅಂಕಣ ವಿಭಾಗದಲ್ಲಿ ಬರಹಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನು ಸುತ್ತಾಡಿ ನೂರಾರು ಜನರ ಕಥೆಯನ್ನ ಜನರ ಮುಂದೆ ತಂದಿಟ್ಟಿದ್ದಾರೆ. ಅಷ್ಟೇಅಲ್ಲದೆ ಕುಂಭ ಕಲೆ ತರಬೇತಿ ಪಡೆದು. ಅತಿ ಚಿಕ್ಕ ಮಣ್ಣಿನ ಗಣಪತಿಗಳನ್ನು ನಿರ್ಮಿಸುವ ಮೂಲಕ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್, ವಾದ್ಯ ಗಣಪತಿಯ ಕಲೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವವನ್ನು ತಮ್ಮದಾಗಿಸಿಕೊಂಡಿದ್ದಾರೆ.