ಪ್ರಾಧ್ಯಾಪಕ ಜ್ಯೋತಿ ಹೊಸೂರ ಅವರು ಮೂಲತಃ ಉತ್ತರ ಕರ್ನಾಟಕದವರು. ಅಧ್ಯಯನ, ಅಧ್ಯಾಪನ, ಬೋಧನೆಯ ಜೊತೆಗೆ ಸಾಹಿತ್ಯ ಕೃಷಿಯಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಜನಪದ ಸಾಹಿತ್ಯ ಸಂಗ್ರಹ, ಸಂಪಾದನೆ, ಪ್ರಕಟಣೆ, ವಿವೇಚನೆ, ಸಂಶೋಧನೆಯಲ್ಲಿ ಸೋಪಜ್ಞತೆ ತೋರಿದ್ದಾರೆ. ಇವರು ಜಾನಪದ ತಜ್ಞರೂ ಹೌದು. ಸಾಹಿತಿ ಸಿ. ಕೆ. ನಾವಲಗಿಯವರು `ಪ್ರೊ. ಜ್ಯೋತಿ ಹೊಸೂರ’ ಕೃತಿಯಲ್ಲಿ ವ್ಯಕ್ತಿಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ‘ಡಾ. ಶಂಬಾ ಜೋಶಿಯವರ ಅಸಂಕಲಿತ ಲೇಖನಗಳು’ ಅವರ ಪ್ರಕಟಿತ ಕೃತಿ.