ಕನ್ನಡದ ಪ್ರಮುಖ ಕಾದಂಬರಿಗಾರ್ತಿಯಾದ ಜಯಲಕ್ಷ್ಮಿ ಎಂ. ಕೆ. ಅವರು 1929 ಜನವರಿ 06 ಚಿಕ್ಕಮಗಳೂರಿನಲ್ಲಿ ಜನಿಸಿದರು. ತಾವು ಬದುಕಿದ್ದ ಅಲ್ಪ ಕಾಲದಲ್ಲಿ ಅತ್ಯತ್ತಮ ಕಾದಂಬರಿಗಳನ್ನು ಕನ್ನಡ ಓದುಗರಿಗೆ ನೀಡಿದ್ದಾರೆ. ‘ಕನಸಿನ ಕಡೆ, ಮೋಡ ಚದುರಿತು, ಬಾಳು ಬೆಳಗಿತು, ಮಾಯದ ಬಲೆ, ತಾಯ ಹರಕೆ, ಬಾಳಿನಪಥ, ಬಾಳ ಮುಂಜಾವು, ಸಂಸಾರದಲ್ಲಿ ಸಮರ, ತಾರೆ ಮಿನುಗಿತು, ಹೂವು ಚೆಲ್ಲಿದ ಹಾದಿ, ಸಮರ ಕೋಲಾಹಲ, ಪ್ರೇಮ ಪಂಜರ, ಕನಸು ನನಸು, ನಿಂದೆಯ ನೆಲೆ, ಪತನದ ಹಾದಿ’ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ‘ಮಂಗಳವಾದ್ಯ ಮೊಳಗಿತು’ ಅವರ ಕಥಾಸಂಕಲನ. 1968 ಏಪ್ರಿಲ್ 14 ರಂದು ನಿಧನರಾದರು.